ಶಿರಸಿ: 2024-2025ನೇ ಸಾಲಿನ ನೂತನ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭವು ಆ.6ರಂದು ಶಾಲೆಯ ಸಭಾಭವನದಲ್ಲಿ ಜರುಗಿತು. ಈ ಸಮಾರಂಭದಲ್ಲಿ ಪ್ರಸ್ತುತ ಆನಂದ ಆಶ್ರಮ ಪ್ರೌಢಶಾಲೆ ಮತ್ತು ಕಾಲೇಜು, ಭಟ್ಕಳ ಇದರ ಮುಖ್ಯ ಶಿಕ್ಷಕಿಯಾಗಿ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಸ್ಟರ್ ತೆರೆಸಿಯಾ ಶೆರಾಂವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಫಾದರ ಸಂದೇಶ ಫರ್ನಾಂಡಿಸ್, ಉಪ ಮುಖ್ಯ ಶಿಕ್ಷಕರಾದ ಫಾದರ ಜೂಲಿಯನ್ ರಸ್ಕಿನಾ, ಶಿಕ್ಷಕರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿಯನ್ನು ಶಾಲೆಯ ದೈಹಿಕ ಶಿಕ್ಷಕರಾದ ಜೊಯಿಲರವರು ಬೋಧಿಸಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಶಾಲಾ ಮಂತ್ರಿಮಂಡಲದ ವಿದ್ಯಾರ್ಥಿಗಳಿಗೆ ಪ್ರೀತಿಪೂರ್ವಕ ಅಭಿನಂದನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಶಿಕ್ಷಕೇತರ ಶಾಲಾ ಸಿಬ್ಬಂದಿಗಳು ಸಲ್ಲಿಸಿದ್ದಾರೆ. ಶಾಲಾ ಮಂತ್ರಿಮಂಡಲದ ಅಧ್ಯಕ್ಷರಾಗಿ ಕ್ರಿಸ್ಟನ್ ನರೋನ್ಹಾ, ಶಾಲಾ ಮಂತ್ರಿಮಂಡಲದ ಅಧ್ಯಕ್ಷೆಯಾಗಿ ಮೇಘನಾ ನಾಯಕ, ಶಿಸ್ತು ಸಚಿವರಾಗಿ ಅಭಿನವ ರವಿ ಮುಡ್ಕಿ, ದೀಪ್ತಿ ರತನ್ ಜೋಗಳೇಕರ, ಕ್ರೀಡಾ ಸಚಿವರಾಗಿ ಸ್ಯಾಮುವೆಲ್ ಮಚಾಡೊ, ಚಿನ್ಮಯಿ ಶೆಟ್ಟಿ ಸಾಂಸ್ಕೃತಿಕ ಸಚಿವರಾಗಿ ಸಮರ್ಥ ಕುಲಕರ್ಣಿ, ಬಿಂದು ಜಗದೀಶ ಜೈವಂತ,ಮಿಡಿಯಾ ಸಚಿವರಾಗಿ ದಿವ್ಯಾಂಶ್ ಮಾಲಿ, ಶಾಲ್ವಿನ್ ರೊಡ್ರಿಗಸ್ ಆರೋಗ್ಯ ಸಚಿವರಾಗಿ ಆದಿತ್ಯಾ ಶೆಟ್ಟಿ, ತನ್ವಿ ಸಿರ್ಸಿಕರ್, ಬ್ಲ್ಯೂ ಹೌಸ್ ಕ್ಯಾಪ್ಟನ್ ಸ್ಯಾಮುವೆಲ್ ನೊರೋನ್ಹಾ,ನಿವೇದಿತಾ ಎಚ್. ಆಗೇರ ಗ್ರೀನ್ ಹೌಸ ಕ್ಯಾಪ್ಟನ್ ಗೌರವ ಪೈ, ಪ್ರಣತಿ ಪುರಾಣಿ,ರೆಡ್ ಹೌಸ್ ಕ್ಯಾಪ್ಟನ್ ಭರತ್ ಎನ್. ದೇವಳಿ, ಆಮ್ನಾ ಸ್ಯೆಯದ್, ಯೆಲ್ಲೋ ಹೌಸ ಕ್ಯಾಪ್ಟನ್ ಪವನಕುಮಾರ, ಭೂಮಿಕಾ ಸವದತ್ತಿ ಪದಗ್ರಹಣ ಸ್ವೀಕರಿಸಿದರು.