Slide
Slide
Slide
previous arrow
next arrow

ನಂದಿಗದ್ದೆಯಲ್ಲಿ ಸಂವಿಧಾನ ಜಾಗೃತಿ ಜಾಥಾ: ಸಮಾವೇಶ ಯಶಸ್ವಿ

300x250 AD

ಜೋಯಿಡಾ: ತಾಲೂಕಿನ ನಂದಿಗದ್ದೆ ಬಯಲು ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉತ್ತರಕನ್ನಡ, ತಾಲೂಕಾಡಳಿತ ಜೋಯಿಡಾ, ಗ್ರಾಮ ಪಂಚಾಯತಿ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಕುರಿತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹಮ್ಮದ್.ಹೆಚ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಅರ್ಥ, ಮಹತ್ವ, ಅದರ ಪ್ರಾಮುಖ್ಯತೆ, ಜಾಗೃತಿ ಜಾಥಾ, ಸಮಾವೇಶದ ಕುರಿತು ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ, ಗ್ರಾಮ ಪಂಚಾಯತ ಸದಸ್ಯ ಧವಳೋ ಗಣೇಶ ಸಾವರ್ಕರ್ ಸಂವಿಧಾನದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಸುಮನಾ ಹರಿಜನ, ಶೋಭಾ ಎಲ್ಲೇಕರ, ಉಪ ವಲಯಾರಣ್ಯಾಧಿಕಾರಿ ಅಶೋಕ್ ಕಾಂಬಳೆ, ತಾಲ್ಲೂಕು ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿ, ನೋಡಲ್ ಅಧಿಕಾರಿ, ಸಿಡಿಪಿಓ ಅಧಿಕಾರಿ, ಸ್ಥಳೀಯ ಶಾಲಾ ಶಿಕ್ಷಕರು, ಆರಕ್ಷಕ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top