Slide
Slide
Slide
previous arrow
next arrow

ರಿಯಾಯತಿ ದರದಲ್ಲಿ ವಿಜ್ಞಾನ ಪ್ರಯೋಗಾಲಯ ಅಳವಡಿಕೆ: ಸುರೇಂದ್ರ ಕುಲಕರ್ಣಿ

300x250 AD

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿಯ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ವಿಜ್ಞಾನ ಪ್ರಯೋಗಾಲಯ ರಿಯಾಯತಿ ದರದಲ್ಲಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ವಿಜ್ಞಾನಿ ಸುರೇಂದ್ರ ಕುಲಕರ್ಣಿ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಪ್ರಯೋಗಾಲಯದ ಕಲಿಕೆಯ ಅಗತ್ಯವಿದ್ದು, ಜಿಲ್ಲೆಯ ಹೆಚ್ಚಿನ ಶಾಲೆ ಕಾಲೇಜಿನಲ್ಲಿ ಸುಸಜ್ಜಿತವಾದ ಪ್ರಯೋಗಾಲಯ ವಂಚಿತವಾಗಿದ್ದು, ಇದನ್ನು ಒದಗಿಸಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ. ನಮ್ಮ ದೇಶದಲ್ಲಿ ವಿಜ್ಞಾನಿಗಳ ಕೊರತೆ ಇದ್ದು, ಮುಂದುವರೆದ ದೇಶದಲ್ಲಿ ವಿಜ್ಞಾನಿಗಳ ಸೇವೆಯಿಂದ ಅಭಿವೃದ್ದಿಯತ್ತ ಮುನ್ನುಗುತ್ತಿದೆ. ನಮ್ಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಡವರು, ಆದಿವಾಸಿಗಳು, ಕೃಷಿ ಚಟುವಟಿಕೆ ಅವಲಂಬಿತರಾದವರೆ ಅಧಿಕವಾಗಿದ್ದಾರೆ. ಆರ್ಥಿಕ ಸ್ಥಿತಿಗನುಸಾರವಾಗಿ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುತ್ತಿದ್ದು, ಅವರು ಅಧ್ಯಯನ ಮಾಡುವ ಶಾಲೆ ಕಾಲೇಜಿನಲ್ಲಿ ದೊಡ್ಡ ದೊಡ್ಡ ಪಟ್ಟಣದಲ್ಲಿ ದೊರೆಯುವ ಸೌಲಭ್ಯವುಳ್ಳ ಪ್ರಯೋಗಾಲಯವನ್ನು ನಿರ್ಮಾಣ‌ಮಾಡಬೇಕು ಎನ್ನುವ ಉದ್ದೇಶದಿಂದ ಇದನ್ನು ಆರಂಭಿಸಲಾಗುತ್ತಿದೆ. ತಾಲೂಕಿನ ಕಡತೊಕಾ ಹಾಗೂ ಕಾಸರಕೋಡಿನಲ್ಲಿ ಈಗಾಗಲೇ ಆರಂಭಿಸಿದ್ದು, ದಾನಿಗಳು, ಪೂರ್ವ ವಿದ್ಯಾರ್ಥಿಗಳ ನೆರವಿನಿಂದ ತಮ್ಮೂರಿನ ಶಾಲೆ ಹಾಗೂ ಕಾಲೇಜಿನಲ್ಲಿ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದರು.

300x250 AD

ಇನ್ನೊರ್ವ ವಿಜ್ಞಾನಿಗಳಾದ ಸುಪ್ರೀತ ಮಾತನಾಡಿ ಮಕ್ಕಳಲ್ಲಿ ಗ್ರಹಿಕಾ ಶಕ್ತಿಗಿಂತ ನೋಡಿ ಹಾಗೂ ಪ್ರಯೋಗ ಮಾಡಿ ವಿಷಯವನ್ನು ಅರ್ಥೈಸಿಕೊಳ್ಳುವ ಶಕ್ತಿಯು ಉಪಯೋಗವಾಗುದರಿಂದ ವಿಜ್ಞಾನ ಪ್ರಯೋಗಾಲಯವು ಹೆಚ್ಚಿನ ಪರಿಣಾಮ ಬೀರಲಿದೆ. ವಿಜ್ಞಾನ ವಿಷಯದ ಕುರಿತು ಆಸಕ್ತಿ ಮೂಡಿಸಲು ಈಗಾಗಲೇ 1400ಕ್ಕೂ ಅಧಿಕ ಕಡೆ ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಲಕ್ಷ ರೂಪಾಯಿಯ ರಿಯಾಯಿತಿ ದರದಲ್ಲಿ ದೊಡ್ಡ ಮಟ್ಟದ ಪ್ರಯೋಗಾಲಯ ಒದಗಿಸುತ್ತಿದ್ದೇವೆ. ಈ ವ್ಯವಸ್ಥೆಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ಮೂಲಕ ಹೆಚ್ಚಿನವರು ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ಮುಂದೊಂದು ದಿನ ಜಿಲ್ಲೆಯ ವಿದ್ಯಾರ್ಥಿಯೊರ್ವರು ನೊಬೆಲ್ ಪ್ರಶಸ್ತ್ರಿ ಸ್ವೀಕರಿಸುವ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಮನದಾಸೆ ನಮ್ಮದು ಎಂದರು. ಆಸಕ್ತರು TEL:+918197089425 ನಂಬರಗೆ ಸಂಪರ್ಕಿಸಬಹುದು.

Share This
300x250 AD
300x250 AD
300x250 AD
Back to top