Slide
Slide
Slide
previous arrow
next arrow

ಪೊಲೀಸ್ ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ಸನ್ಮಾನ

300x250 AD

ಸಿದ್ದಾಪುರ; ತಾಲೂಕಿನ ಹುಲಿಮನೆ ಮೂಲದ ಪ್ರಸಕ್ತ ಸಿ.ಐ.ಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಹೆಗಡೆ ಹುಲಿಮನೆಯವರನ್ನು ಹುಲಿಮನೆ ಕುಟುಂಬದವರು ಶುಕ್ರವಾರ ಶಂಕರಮಠದ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಪತ್ರ ವಾಚಿಸಿದ ಜಯಂತ ಶ್ರೀಪಾದರಾವ್ ರಾಘವೇಂದ್ರ ಹೆಗಡೆಯವರು ತಮ್ಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಶ್ಲಾಘನೀಯ ಸೇವಾಪದಕ ಪಡೆಯುವ ಮೂಲಕ ಇಲಾಖೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಂದೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವವನ್ನು ಸಹ ಇವರು ಪಡೆದಿದ್ದು ಹುಲಿಮನೆ ಕುಟುಂಬಕ್ಕೆ ಹೆಮ್ಮೆ ತರುವ ಸಂಗತಿ ಎಂದರು. ಸವಾಲಿನ ಪ್ರಕರಣಗಳಾದ ಬಹುಕೋಟಿ ವಂಚನೆಯ ಅಬ್ದುಲ್ ಕರೀಂ ತೆಲಗಿ ನಕಲಿ ಸ್ಟಾಂಪ್ ಪೇಪರ್ ಜಾಲದ ಪ್ರಾಥಮಿಕ ತನಿಖೆ, ಪಿ.ಎಸ್.ಐ.ನೇಮಕಾತಿ ಅಕ್ರಮ ಪ್ರಕರಣದ ಉಸ್ತುವಾರಿ, ಸೈಬರ್ ಅಪರಾಧಗಳ ಬಗೆಹರಿಸುವಿಕೆ ಮುಂತಾದ ಕ್ಲಿಷ್ಟಕರ ಪ್ರಕರಣಗಳನ್ನು ರಾಘವೇಂದ್ರ ಹೆಗಡೆ ನಿಭಾಯಿಸಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

300x250 AD

ಹುಲಿಮನೆ ಕುಟುಂಬದ ಹಿರಿಯರಾದ ಸದಾನಂದ ಹೆಗಡೆ ಕನ್ನಳ್ಳಿ, ರಾಘವೇಂದ್ರ ಹೆಗಡೆಯವರ ತಂದೆ ಕೃಷ್ಣಮೂರ್ತಿ ಹೆಗಡೆ, ತಾಯಿ ಶ್ರೀಮತಿ ಲಲಿತಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಶ್ರೀಧರ ಹೆಗಡೆ ಹುಲಿಮನೆ, ರಂಗ ಸೌಗಂಧದ ರೂವಾರಿ ಗಣಪತಿ ಹೆಗಡೆ ಹುಲಿಮನೆ ಸೇರಿದಂತೆ ಹುಲಿಮನೆ ಕುಟುಂಬದ ನೂರಾರು ಸದಸ್ಯರು ಪಾಲ್ಗೊಂಡಿದ್ದರು. ಸನ್ಮಾನಿತ ರಾಘವೇಂದ್ರ ಹೆಗಡೆ ಮಾತನಾಡಿ ನಾನು ಹೆಚ್ಚಿನದನ್ನೇನೂ ಸಾಧನೆ ಮಾಡಿಲ್ಲ. ಸಾಧಿಸಬೇಕಾದದ್ದು ಬಹಳಷ್ಟಿದೆ. ಈಗ ನೀಡಿದ ಸನ್ಮಾನ ಮತ್ತಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುವಲ್ಲಿ ಪ್ರೇರಣೆಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಪವಿತ್ರಾ ಹೆಗಡೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪತ್ರಕರ್ತೆ, ಸಾಹಿತಿ ಭಾರತಿ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ನಿರ್ವಹಿಸಿದರು. ಜಯರಾಮ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top