Slide
Slide
Slide
previous arrow
next arrow

ಯುವ ಪರಿವರ್ತಕ, ಯುವ ಸಮಾಲೋಚಕ ಹುದ್ದೆಗೆ ಅರ್ಜಿ ಆಹ್ವಾನ

300x250 AD

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಯೋಜನೆಯಾದ “ಯುವಸ್ಪಂದನ”ದಲ್ಲಿ ಯುವ ಪರಿವರ್ತಕ/ ಯುವಸಮಾಲೋಚಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಸ್ವ- ವಿವರದೊಂದಿಗೆ ಜನವರಿ 10ರೊಳಗಾಗಿ ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹರಿದೇವ ನಗರ, ಹಬ್ಬುವಾಡ , ಕಾರವಾರ ರವರಿಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಪದವೀಧರರಾಗಿದ್ದು, 21 ರಿಂದ 35 ವರ್ಷ ವಯೋಮಾನದವರಾಗಿರಬೇಕು. ಕಾರವಾರ, ಯಲ್ಲಾಪುರ, ಕುಮಟಾ ಮತ್ತು ಹಳಿಯಾಳ ಹಾಗೂ ಭಟ್ಕಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲ, ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ಮತ್ತು ಕೌಶಲ್ಯ ಸಂಹವನ ಮತ್ತು ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು. ಆಯ್ಕೆಯಾದವರಿಗೆ ಗೌರವಧನ ರೂ. 6000/- ಮತ್ತು ಪ್ರತಿ ತಿಂಗಳ (ಗರಿಷ್ಠ ರೂ 1000-00 ಪ್ರವಾಸ ಭತ್ಯೆ) ಆರು ತಿಂಗಳ ಕಾಲ ನೀಡಲಾಗುವುದು. ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top