ಕುಮಟಾ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ನಿರ್ಮಿಸುವಂತೆ ಅಧಿವೇಶನದಲ್ಲಿ ಚರ್ಚಿಚಲು ಒತ್ತಾಯಿಸಿ, ಡಿ.1 ರಂದು ಕ.ರ.ವೇ ಸ್ವಾಭಿಮಾನಿ ಬಣ ಕುಮಟಾದಿಂದ ಸಚಿವ ಮಂಕಾಳ ವೈದ್ಯರ ನಿವಾಸದವರೆಗೆ ಬೈಕ್ ರ‍್ಯಾಲಿ ನಡೆಸಿ, ಮನವಿ ಸಲ್ಲಿಸಲಿದೆ ಎಂದು ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ ಹಲವು ವರ್ಷಗಳಿಂದಲೂ ಕ.ರ.ವೇ ಸ್ವಾಭಿಮಾನಿ ಬಣ, ಆಸ್ಪತ್ರೆ ಹೊರಾಟ ಸಮಿತಿ ಹಾಗೂ ಹಲವು ಸಂಘಟನೆಗಳ ಒಕ್ಕೂಟ ಮತ್ತು ಪ್ರಜ್ಞಾವಂತ ಯುವ ಮನಸ್ಸುಗಳು ಸೇರಿ ವಿವಿಧ ರೀತಿಯ ಹೋರಾಟಗಳನ್ನು ಮಾಡುತ್ತಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸಾವು ನೋವುಗಳು ಸಂಭವಿಸುತ್ತಲೇ ಇರುವುದು ನೋವಿನ ಸಂಗತಿ.
ಆದ್ದರಿAದ ಡಿ.04 ರಿಂದ ನಡೆಯಲಿರುವ ಅಧಿವೇಶನದಲ್ಲಿ ಸಚಿವರಾದ ಮಂಕಾಳ ವೈದ್ಯರು ಈ ಕುರಿತು ಚರ್ಚೆ ನಡೆಸಬೇಕೆಂಬ ಹಕ್ಕೊತ್ತಾಯದ ಮನವಿಯನ್ನು ಅವರ ನೀವಾಸಕ್ಕೆ ಡಿ.1ರಂದು ಕುಮಟಾದಿಂದ ಬೈಕ್ ರ‍್ಯಾಲಿ ಮೂಲಕ ತೆರಳಿ ನೀಡಬೇಕೆಂದು ನಿರ್ಧರಿಸಿದ್ದೇವೆ ಎಂದು ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ತಿಳಿಸಿದರು.