Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ ಜಿಲ್ಲೆಯ ಜನರಿಗೆ ಮಾರಕ ; ರವೀಂದ್ರ ನಾಯ್ಕ

300x250 AD

ಯಲ್ಲಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಿಲ್ಲೆಯ ಅಭೀವೃದ್ಧಿಗೆ ವರದಿಯ ಅನುಷ್ಟಾನವು ಮಾರಕವಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಡಿ.2 ರಂದು ಶಿರಸಿಯಲ್ಲಿ ಜರಗುವ ಕಸ್ತೂರಿ ರಂಗನ್ ವರದಿ ವಿರೋಧ ಜಾಥಾದ ಪೂರ್ವಭಾವಿ ಸಭೆ ಹಾಗೂ ತಾಲೂಕಾದ್ಯಂತ ಜಾಗೃತ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ಕುರಿತು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶೇ. 64 ರಷ್ಟು ಬೌಗೋಳಿಕ ಪ್ರದೇಶವು ಅತೀ ಸೂಕ್ಷ್ಮ ಪರಿಸರ ವ್ಯಾಪ್ತಿಯಲ್ಲಿ ಒಳಪಡುವುದರಿಂದ, ನೈಜ ಜೀವನ ಮತ್ತು ಕೃಷಿ ಚಟುವಟಿಕೆಗೆ ನಿರ್ಭಂದನ ಹೇರುವುದರಿಂದ ಜಿಲ್ಲೆಯ ಅಭಿವೃದ್ದಿಗೆ ಮಾರಕವಾಗುವುದೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವರದಿ ಅನುಷ್ಟಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಸಂಚಾಲಕರಾದ ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಸೀತಾರಾಮ ನಾಯ್ಕ ಕುಂದರಗಿ, ಶಂಕರ ದೇವಾಡಿಗ ಭರತನಹಳ್ಳಿ, ಸುಬ್ರಾಯ ಭಟ್ಟ ಮಾಗೋಡ, ರವಿ ಕೈಟಗೇರಿ, ಬಾಳು ಕೊಕರೆ ಜಕ್ಕೊಳ್ಳಿ, ರಾಮಾ ಸಿದ್ಧಿ ಮಜ್ಜಿಗೆಹಳ್ಳಿ, ದುಂಡು ಕೊಕರೆ, ರವೀಂದ್ರ ಹೆಗಡೆ ದೊಡ್ಡಬೇಣ, ಪ್ರಭಾಕರ್ ನಾಯ್ಕ ಕುಂದರಗಿ, ಗಣಪತಿ ಭಟ್ಟ, ಬಾಬು ಪೂಜಾರಿ, ದಿವಾಕರ ಮರಾಠಿ ಆನಗೋಡ, ರಾಘವೇಂದ್ರ ನಾಯ್ಕ ಗುಳ್ಳಾಪುರ, ಭಾಸ್ಕರ ಗೌಡ ಹಿತ್ಲಳ್ಳಿ, ಶೇಖರ್ ನಾಯ್ಕ ಹಿತ್ಲಳ್ಳಿ ಮುಂತಾದವರು ಅಭಿಯಾನದಲ್ಲಿ ನೇತ್ರತ್ವ ವಹಿಸಿದ್ದರು.

300x250 AD

ಯಲ್ಲಾಪುರ ತಾಲೂಕಿನ 87 ಹಳ್ಳಿಗಳು ಸೂಕ್ಷ್ಮ ಪ್ರದೇಶ:
ಯಲ್ಲಾಪುರ ತಾಲೂಕಿನ ಕುಂದರಗಿ, ಕಣ್ಣಿಗೇರಿ, ನಂದೊಳ್ಳಿ, ಆನಗೋಡ, ದೇಹಳ್ಳಿ, ಇಡಗುಂದಿ, ಕಿರವತ್ತಿ, ಮದನೂರು, ಹಿತ್ಲಳ್ಳಿ, ವಜ್ರಳ್ಳಿ, ಹಾಸಣಗಿ, ಮಂಚಿಕೇರಿ, ಉಮ್ಮಚಗಿ, ಉಪಳೇಸರ, ಮಲವಳ್ಳಿ, ಚಂದಗುಳಿ, ಮಾವಿನಮನೆ ಹೀಗೆ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 87 ಹಳ್ಳಿಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.

Share This
300x250 AD
300x250 AD
300x250 AD
Back to top