ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಗೋಸೇವಾ ಗತಿವಿಧಿ, ದಾಂಡೇಲಿ, ಗೋವರ್ಧನ ರಿ ಗೋಶಾಲೆ ಕರಡೊಳ್ಳಿ, ಸಂಕಲ್ಪ ಸೇವಾ ಸಂಸ್ಥೆ, ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಜ್ವರ, ರಕ್ತದೊತ್ತಡ, ಸಿಹಿಮೂತ್ರ, ವಾಂತಿಭೇದಿ, ಮೂಲವ್ಯಾಧಿ, ಅಲರ್ಜಿ, ಸಂಧಿವಾತ, ನೆಗಡಿ, ಮೈಕೈನೋವು, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆ, ನಿದ್ರಾಹೀನತೆ, ಸೋರಿಯಾಸಿಸ್, ಅರೆತಲೆನೋವು, ಚರ್ಮರೋಗ, ಮೂರ್ಛೆರೋಗ, ಅಶಕ್ತತೆ, ದೃಷ್ಟಿನೇತ್ರ ಸಮಸ್ಯೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬುದ್ಧಿಮಾಂದ್ಯತೆ, ನರಗಳ ದೌರ್ಬಲ್ಯ, ಸ್ತ್ರೀ ರೋಗಗಳು ಹೀಗೆ ಬಹುತೇಕ ಎಲ್ಲ ರೋಗಗಳ ತಪಾಸಣೆ ನಡೆಸಿ, ಪಂಚಗವ್ಯ ಔಷಧಿಗಳ ಚಿಕಿತ್ಸೆ ನೀಡಲಾಯಿತು.
ಡಾ.ವಿಜಯಕುಮಾರ್ ಮಠ ಹುಬ್ಬಳ್ಳಿ ರೋಗಿಗಳ ತಪಾಸಣೆ ನಡೆಸಿದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಕಾರ್ಯದರ್ಶಿ ಪ್ರಸಾದ ಹೆಗಡೆ, ಆರ್.ಎಸ್.ಎಸ್ ಗೋ ಸೇವಾ ಗತಿವಿಧಿಯ ಜಿಲ್ಲಾ ಸಂಯೋಜಕ ಗಣಪತಿ ಕೋಲಿಬೇಣ, ಶಿರಸಿ ವಿಭಾಗ ಪ್ರಮುಖ ವಿನಾಯಕ ಕಾನಳ್ಳಿ, ಪ್ರಮುಖರಾದ ರಾಮಕೃಷ್ಣ ಕವಡಿಕೆರೆ, ಬಾಬು ಬಾಂದೇಕರ್, ಗೋಪಾಲಕೃಷ್ಣ ಗಾಂವ್ಕರ ಇತರರಿದ್ದರು. ನೂರಾರು ಜನ ಶಿಬಿರದ ಪ್ರಯೋಜನ ಪಡೆದರು.