ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ರವಿ ನಾಯ್ಕ ಇಂಜಿನಿಯರ್ ಮನೆಯ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ಕೆಲವು ಬೇರೆ ಪಕ್ಷದ ಕಾರ್ಯಕರ್ತರು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ನಗರ ಘಟಕದ ಅಧ್ಯಕ್ಷ ರವಿಚಂದ್ರ ನಾಯ್ಕ, ಕ್ಷೇತ್ರದ ಈಗಿನ ಶಾಸಕರನ್ನು ಇಲ್ಲಿಯವರು ಎಂದು ಮತ ನೀಡಿ ಮಂತ್ರಿಯಾಗಿ ಮಾಡಲಾಯಿತು. ಆದರೇ ಅವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈಗ ಜನರಿಗೆ ತಮ್ಮ ತಪ್ಪಿನ ಮನವರಿಕೆಯಾಗಿದೆ. ಇಂಥಹ ಸಂದರ್ಭದಲ್ಲಿ ಕಾರ್ಯಕರ್ತರಾದ ನಾವುಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಪಾಟೀಲ್ ಅವರನ್ನು ಆಯ್ಕೆ ಮಾಡುವ ಕಡೆಗೆ ಹೆಚ್ಚಿಲಕ್ಷ ವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಮೈನುರಿಟಿ ಅಧ್ಯಕ್ಷ ಮಜೀದ್ ಅಹ್ಮದ್ ಮಾತನಾಡಿ, ಬಿಜೆಪಿಯ ಸುಳ್ಳು ಅಶ್ವಾಸನೆ ನಂಬಿ 10 ವರ್ಷಗಳಿಂದ ಜನರು ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಆಗಲಿಲ್ಲ. ಸದಸ್ಯರಾದ ಕಾರ್ಮಿಕರಿಗೆ ಕಳಪೆ ಕಿಟ್ ಅನ್ನು ನೀಡಲಾಗಿದ್ದು, ರೈತರಿಗೆ ನ್ಯಾಯ ನೀಡಲಾಗದಿದ್ದರು, ಅವರ ವಿರುದ್ಧ ಕಾನೂನು ರಚಿಸಿ, ಮನ್ ಕಿ ಬಾತ್, ಅಚ್ಛೇ ದಿನ್ ಎಂದು ಜನರನ್ನು ವಂಚಿಸಲಾಗಿತ್ತಿದೆ. ಸಜ್ಜನ ವಿ.ಎಸ್.ಪಾಟೀಲ್ ಅವರು ಪಕ್ಷದ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ನಾಯಕರಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ, ಬಿಜೆಪಿಯಲ್ಲಿ ಸಂಘಟನೆಯಿಂದ ಮಾಡುತ್ತಾರೆ. ಹಾಗೇ ನಾವು ಸಹ ಪಕ್ಷದ ಸಿದ್ಧಾಂತಗಳನ್ನು ಹಾಗೂ ಪ್ರಣಾಳಿಕೆಯನ್ನು ಮನೆ ಮನೆಗೆ ಮುಟ್ಟಿಸಿ, ಸೇರ್ಪಡೆಯಾದವರ ಜೊತೆಗೂಡಿ ಬೆರೆತು ಕೆಲಸ ಮಾಡಬೇಕು. ದುಡ್ಡು ಕೊಟ್ಟವರ ವಿರುದ್ಧವಾಗಿ ನಮಗೆ ಸರಿ ಅನಿಸಿದ್ದವರಿಗೆ ಮತ ನೀಡಿದರೆ ತಪ್ಪಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೊಂಡ ಯುವಕರಿಗ ರವಿ ನಾಯ್ಕ್ ಅವರು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ತಾಲೂಕು ಮಹಿಳಾ ಅಧ್ಯಕ್ಷೆ ಪೂಜಾ ನೇತ್ರಕರ, ಪ.ಪಂ ಸದಸ್ಯರಾದ ಕೆಸರ ಸಯ್ಯದಲಿ ಹಾಗೂ ನರ್ಮದಾ ನಾಯ್ಕ, ಪ್ರಮುಖರಾದ ಫೈರೋಜ ಸೈಯದ್, ಬ್ಯಾರಿ, ಅನ್ವರ್ ಶೇಖ, ಅನಿಲ ಮರಾಠೆ, ವೆಂಕಟೇಶ ದೇವರ, ಅಕ್ಷಯ್ ರೇವಣಕರ, ದೇವಿದಾಸ ನಾಯರ್ ಮುಂತಾದವರು ಪಾಲ್ಗೊಂಡಿದ್ದರು.