ಹೊನ್ನಾವರ: ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ, ಸೌಟ್ಸ್ ಮತ್ತು ಗೈಡ್ಸ್ ಕಾರವಾರ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎಸ್.ಭಟ್ ಅವರ ಹುಟ್ಟು ಹಬ್ಬವನ್ನು ಪಟ್ಟಣದ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಜುಲೈ ತಿಂಗಳಿನಲ್ಲಿ ಜನಿಸಿದ ಶಾಲೆಯ ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಹಾಗೂ ಎಸ್.ಎಸ್.ಭಟ್ ಅವರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಭಟ್ ಅವರು ವಿದ್ಯಾರ್ಥಿಗಳಿಗೆ ಸೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರಗಳನ್ನು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಬಿ.ಡಿ. ಫರ್ನಾಂಡೀಸ್ ಮಾತನಾಡಿದರು.ಸಂಸ್ಥೆಯ ಮುಖ್ಯಸ್ಥರಾದ ರೆ.ಫಾದರ್ ಲಿಜೋ ಚಾಕೋ, ಪ್ರಾಚಾರ್ಯ ಥೆರೆಸಾ ಫರ್ನಾಂಡೀಸ್, ಅತಿಥಿಗಳಾದ ಜಿ.ಜಿ. ಸಭಾಹಿತ ಸಾಮಾಜಿಕ ಕಾರ್ಯಕರ್ತ ಸುರೇಶ ಭಟ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೇಂಟ್ ಥಾಮಸ್ ಮುಖ್ಯೋಪಾಧ್ಯಾಯ ಎಸ್ ವೈ, ಬೈಲೂರು, ಕರಿಸಿದ್ದಪ್ಪಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಖಜಾಂಚಿ ಆರ್.ಟಿ. ಹೆಬ್ಬಾರ, ಕುಮಟಾ ಸೌಟ್ಸ್ ಮತ್ತು ಗೈಡ್ ಕಾರ್ಯದರ್ಶಿ ಕೆ. ಪಿ. ಭಂಡಾರಿ, ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ, ಹೊನ್ನಾವರ ಸೌಟ್ಸ್ ಎಂಡ್ ಗೈಡ್ಸ್ ಕಾರ್ಯದರ್ಶಿ ಎಮ್.ಎನ್.ಗೌಡ ಉಪಸ್ಥಿತರಿದ್ದರು.