• first
  second
  third
  previous arrow
  next arrow
 • ಸುವಿಚಾರ

  ಪೇಟೀಚೀವರಪಟ್ಟವಸ್ತ್ರಪಟಲಶ್ವೇತಾತಪತ್ರಚ್ಛಟಾಶಾಟೀಹಾರಕಘೋಟಕಸ್ಫುಟಘಟಾಟೋಪಾಯ ತುಭ್ಯಂ ನಮಃ |ಯೇನಾನಕ್ಷರಕುಕ್ಷಯೋಪಿ ಜಗತಃ ಕುರ್ವಂತಿ ಸರ್ವಜ್ಞತಾ-ಭ್ರಾಂತಿಂ ಯೇನ ವಿನಾ ತು ಹಾಸ್ಯಪದವೀಂ ಸಂತೋಪಿ ಕಷ್ಟಂ ಗತಾಃ || ತಲೆಗೊಂದು ಪೇಟ, ರೇಶ್ಮೆವಸ್ತ್ರ, ಹೆಗಲಿಂದ ಇಳಿಬೀಳುವ ಶಾಲು, ತಲೆ ಮೇಲೆ ನೆರಳು ಸೂಸುವ ಬೆಳ್ಗೊಡೆ, ಕೊರಳಲ್ಲಿನ ಹಾರ,…

  Read More

  ಸುವಿಚಾರ

  ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ |ಭವತಿ ಚ ಪುನರ್ಭೂಯಾನ್ಭೇದಃ ಫಲಂ ಪ್ರತಿ ತದ್ಯಥಾಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ | ಗುರುಗಳು ಪಾಠಮಾಡುವಾಗ ತನ್ನ ಶಿಷ್ಯಂದಿರ…

  Read More

  ಸುವಿಚಾರ

  ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ | ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ…

  Read More

  ಸುವಿಚಾರ

  ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ | ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕ ರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ ಧರ್ಮರಾಯನೂ, ಕಾಲಿದಾಸನೆಂಬೋ…

  Read More

  ಸುವಿಚಾರ

  ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ || ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ…

  Read More

  ಸುವಿಚಾರ

  ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ || ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ…

  Read More

  ಸುವಿಚಾರ

  ಧೈರ್ಯಂ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹಿನೀಸತ್ಯಂ ಸೂನುರಯಂ ದಯಾ ಚ ಭಗಿನೀ ಭ್ರಾತಾ ಮನಃಸಂಯಮಃ |ಶಯ್ಯಾ ಭೂಮಿತಲಂ ದಿಶೋಪಿ ವಸನಂ ಜ್ಞಾನಾಮೃತಂ ಭೋಜನಮ್ಏತೇ ಯಸ್ಯ ಕುಟುಂಬಿನೋ ವದ ಸಖೇ ಕಸ್ಮಾದ್ಭಯಂ ಯೋಗಿನಃ || ಯಾರಿಗೆ…

  Read More

  ಸುವಿಚಾರ

  ಭೋಃ ಪಾಂಥ ಪುಸ್ತಕಧರ ಕ್ಷಣಮತ್ರ ತಿಷ್ಠವೈದ್ಯೋsಸಿ ಕಿಂ ಗಣಿತಶಾಸ್ತ್ರವಿಶಾರದೋsಸಿ |ಕೇನೌಷಧೇನ ಮಮ ಪಶ್ಯತಿ ಭರ್ತುರಂಬಾಕಿಂವಾsಗಮಿಷ್ಯತಿ ಪತಿಃ ಸುಚಿರಪ್ರವಾಸೀ || ಮನೆಯೊಂದರ ಹೊಸಿಲಿನ ಹೊರಗೆ ನಿಂತ ವಿವಾಹಿತೆ ತರುಣಿಯೊಬ್ಬಳು ದಾರಿಹೋಕನನ್ನು ಕುರಿತು ಕೇಳುತ್ತಾಳೆ.’ಎಲೈ ದಾರಿಹೋಕನೇ, ಪುಸ್ತಕಧಾರಿಯೇ, ನೀನೇನು ವೈದ್ಯನೋ ಅಥವಾ…

  Read More

  ಸುವಿಚಾರ

  ಯದಂತಸ್ತನ್ನ ಜಿಹ್ವಾಯಾಂ ಯಜ್ಜಿಹ್ವಾಯಾಂ ನ ತದ್ಬಹಿಃಯದ್ಬಹಿಸ್ತನ್ನ ಕುರ್ವಂತಿ ವಿಚಿತ್ರಚರಿತಾಃ ಸ್ತ್ರಿಯಃ || ಮನಸಿನಲ್ಲಿರುವ ವಿಚಾರವು ನಾಲಗೆಯಮೇಲಿರುವುದಿಲ್ಲ, ನಾಲಗೆಯ ಮೇಲಿರುವ ವಿಚಾರವೂ ಹಲವೊಮ್ಮೆ ಹೊರಬೀಳದೇ ಉಳಿಯುತ್ತದೆ. ಯಾವುದನ್ನು ಮುಕ್ತಧ್ವನಿಯಲ್ಲಿ ಆಡುವರೋ ಅದನ್ನು ತಮ್ಮ ಆಚರಣೆಯಲ್ಲಿ ಕಾಣಿಸರು. ಒಟ್ಟಿನಲ್ಲಿ ಸ್ತ್ರೀಯರು ವಿಚಿತ್ರವಾದ…

  Read More

  ಸುವಿಚಾರ

  ಮೃತ್ಯೋರ್ಬಿಭೇಷಿ ಕಿಂ ಮೂಢ ಭೀತಂ ಮುಂಚತಿ ಕಿಂ ಯಮಃಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ || ’ಮೂಢನೇ, (ಮೋಹಗೊಂಡವನೇ), ನೀನು ಸಾವಿಗೆ ಹೆದರುವಿಯಲ್ಲವೇ? ಇವಾಗೇನು, ನೀನು ಭಯಗೊಂಡ ಮಾತ್ರಕ್ಕೆ ಯಮಧರ್ಮನು ನಿನ್ನನ್ನು ಬಿಟ್ಟುಬಿಡುವನೇನು? ಇಲ್ಲವಷ್ಟೇ! ಸಾವಿನ ಭಯ ಶುರುವಾದ್ದೇ…

  Read More
  Back to top