ಶಿರಸಿ: ಟಿಎಮ್‍ಎಸ್ ನಲ್ಲಿ ಮಹಸೂಲು ಹಾಕುವ ರೈತರಿಗೆ ಸೂಪರ್ ಮಾರ್ಟ್ ನಲ್ಲಿ ಮಾಡುವ ವ್ಯವಹಾರಕ್ಕೆ ಕೂಪನ್ ನೀಡಲು ನಿರ್ಧರಿಸಲಾಗಿದೆ.
ಸೋಮವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೊಳ ಮಾಹಿತಿ ನೀಡಿದರು. ಸಾಮಗ್ರಿ ಖರೀದಿಸುವ ಸರ್ಕಾರಿ ನೌಕರರು, ಬ್ಯಾಂಕ್, ಸೊಸೈಟಿ ನೌಕರರು ಮಾಜಿ ಸೈನಿಕರಿಗೂ ಕೂಪನ್ ನೀಡಲು ನಿರ್ಧರಿಸಲಾಗಿದೆ ಎಂದರು. ಎಲ್ಲ ಸರ್ಕಾರಿ ಕಛೇರಿಗೆ ತೆರಳಿ ನೌಕರರಿಗೆ ಕೂಪನ್ ನೀಡಲಾಗುತ್ತದೆ. ಅವರು 1000 ರೂ. ಗಿಂತ ಹೆಚ್ಚು ವ್ಯವಹಾರ ನಡೆಸಿದಲ್ಲಿ ರಿಬೇಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕೃಷಿ ವಿಭಾಗದಲ್ಲೂ ರಿಯಾಯಿತಿ ಇದೆ. ಸದಸ್ಯ ರೈತರಿಗೆ 16 ಲಕ್ಷ ರೂ. ಕೂಪನ್ ನೀಡಲಿದ್ದೇವೆ. ಸೂಪರ್ ಮಾರ್ಟ್ ಆರಂಭವಾಗಿ ಎರಡು ತಿಂಗಳಲ್ಲಿ 1.6 ಕೋಟಿ ವಹಿವಾಟು ನಡೆದಿದೆ ಎಂದು ಹೇಳಿದರು. ಸದಸ್ಯರು ಹಾಗು ಕುಟುಂಬಸ್ತರ ಅನಾರೋಗ್ಯ ಸಹಾಯ ಧನ ಶೇ 50 ರಷ್ಟು ಏರಿಸಿದ್ದೇವೆ. ಕೊನೆ ಗೌಡರಿಗೂ 50000 ರೂ. ಪರಿಹಾರ ಧನ ನೀಡುತ್ತಿದ್ದೇವೆ. ಹಾಲಿ 7000 ಕೃಷಿಕರು ಅಡಿಕೆ ವಿಕ್ರಿ ಮಾಡಿದ್ದಾರೆ. 71 ಸಾವಿರ ಕ್ವಿಂಟಕ್ ಅಡಿಕೆ ವಿಕ್ರಿಯಾಗಿದೆ. ರೈತರಿಗೆ 63 ಲಕ್ಷ, ಸೊಸೈಟಿಗೆ 52 ಲಕ್ಷ ರೂ. ರಿಬೇಟ್ ನೀಡಲಾಗಿದೆ. ನ.13 ರಂದು ವಾರ್ಷಿಕ ಸಭೆ ನಡೆಯಲಿದೆ ಎಂದು ತಿಳಿಸಿದರು. ಇದೇ ವೇಳೆ ವಿಶೇಷ ಕೂಪನ್ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ಎಂ.ಎ. ಹೆಗಡೆ, ಉಪಾಧ್ಯಕ್ಷ ಎಂ.ಪಿ. ಹೆಗಡೆ, ನಿರ್ದೇಶಕರಾದ ಎನ್.ಡಿ. ಹೆಗಡೆ, ಜಿ.ಎಂ. ಹೆಗಡೆ, ಆರ್.ಎಸ್. ಹೆಗಡೆ ಇದ್ದರು.