ನವದೆಹಲಿ: ಪಾಕಿಸ್ಥಾನ ಮೂಲದ ಶಂಕಿತ ಉಗ್ರನೊಬ್ಬನನ್ನು ನಿನ್ನೆ ನವದೆಹಲಿಯಲ್ಲಿ ಬಂಧಿಸಲಾಗಿದೆ.
ನವದೆಹಲಿ ವಿಶೇಷ ತನಿಖಾ ತಂಡವು ಬಂಧಿತ ಉಗ್ರನನ್ನು ತೀವ್ರ ವಿಚಾರಣೆಗೊಳಪಡಿಸಿದೆ. ಪಾಕ್‍ನ ನರೋವಾಲ್ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧಿತ ಉಗ್ರ ಎಂದು ಗುರುತಿಸಲಾಗಿದೆ.
ಬಂದಿತ ಉಗ್ರನಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ನಕಲಿ ಗುರುತಿನ ಚೀಟಿ ಇರಿಸಿಕೊಂಡು ಭಾರತೀಯ ಪ್ರಜೆ ಎಂದು ನವದೆಹಲಿಯಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ನ್ಯೂಸ್ 13