• first
    second
    third
    previous arrow
    next arrow
  • ಲಯನ್ಸ್ ಶಾಲೆಯ ಶ್ರೀಲಕ್ಷ್ಮಿಗೆ ಕರಾಟೆಯಲ್ಲಿ ಬಂಗಾರದ ಪದಕ

    300x250 AD

    ಶಿರಸಿ: ಕರಾಟೆ ದೂ ಕೆಂನ್ರು ಕಾನ್ ಇಂಡಿಯಾ ಅವರು ಹುಬ್ಬಳ್ಳಿಯಲ್ಲಿ ಅ.9, 10 ರಂದು ನಡೆಸಿದ 14 ವರ್ಷ ವಯೋಮತಿ ಒಳಗಿನ ಆಲ್ ಇಂಡಿಯಾ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ವಿ ಹೆಗಡೆ ಬ್ರೌನ್ ಥರ್ಡ್ ಬೆಲ್ಟ್ ಕರಾಟೆ ಸ್ಪರ್ಧೆ ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಆಕರ್ಷಕ ಟ್ರೋಫಿ, ಬಂಗಾರದ ಪದಕ ಹಾಗೂ ಸರ್ಟಿಫಿಕೇಟ್’ನ್ನು ತನ್ನದಾಗಿಸಿಕೊಂಡಿರುತ್ತಾಳೆ.

    300x250 AD


    ವಿದ್ಯಾರ್ಥಿನಿಯ ಈ ಸಾಧನೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸುವುದರೊಂದಿಗೆ ವಿದ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿರುತ್ತಾರೆ.

    Share This
    300x250 AD
    300x250 AD
    300x250 AD
    Back to top