ಯಲ್ಲಾಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶ್ರೀಗುರು ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆಯ ಸಭೆ ನಡೆಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಜೈರಾಮ ಭಟ್ಟ ಮಲವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ವತಿಯಿಂದ ನ.27 ರಂದು ರಾತ್ರಿ 9.30 ಕ್ಕೆ ಕದ್ರಾದಲ್ಲಿ ‘ಭಾರತೀಯ ಬ್ರಿಟೀಷರು’ ನಾಟಕ ಪ್ರದರ್ಶನ ನಡೆಸಲು ನಿರ್ಣಯಿಸಲಾಯಿತು.
ವೇದಿಕೆಯ ಉಪಾಧ್ಯಕ್ಷ ಪ್ರಕಾಶ ಭಂಡಾರಿ, ಪ್ರಧಾನ ಕಾರ್ಯದರ್ಶಿ ದಿಲೀಪ ದೊಡ್ಡಮನಿ, ಸಂಚಾಲಕ ಅಶೋಕ ಮಹಾಲೆ, ಕೋಶಾಧಿಕಾರಿ ರತ್ನಾಕರ ಹೆಬ್ಬಾರ, ಪ್ರಮುಖರಾದ ವಿ.ಪಿ.ಹೆಬ್ಬಾರ್, ಎಂ.ಎ.ಬಾಗೇವಾಡಿ, ಪ್ರವೀಣ ಇನಾಮದಾರ್, ಕೆ.ಎಸ್.ಭಟ್ಟ ಆನಗೋಡ ಮುಂತಾದವರಿದ್ದರು.