ಯಲ್ಲಾಪುರ: ಪಟ್ಟಣದ ಕುಂಬಾರಗಟ್ಟಿ ಬಡಾವಣೆಯ ಮನೆಯೊಂದರಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಜನತೆಯಲ್ಲಿ ಆತಂಕ-ಭಯದ ವಾತಾವರಣ ಸೃಷಿಯಾಯಿತು.
ಕಂಬಾರಗಟ್ಟಿ ಬಡಾವಣೆಯ ಮಹ್ಮದ ಬಿಹಾರಿ ಎಂಬುವವರ ಮನೆಯ ಮೇಲ್ದಾವಣಿಯ ಹೆಂಚಿನಿಂದ ಸುಮಾರು 8 ಅಡಿ ಉದ್ದದ ಹೆಬ್ಬಾವು ಮನೆಯೊಳಗೆ ಪ್ರವೇಶಿಸಿದೆ. ತೀವ್ರ ಭಯಗೊಂಡ ಮನೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ಹಾಗೂ ಉರಗ ತಜ್ಞ ಶ್ರೀಧರ ಬಜಂತ್ರಿ ಮತ್ತು ಶಿವಪ್ಪಶರ್ಮಾ, ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.