ಹಳಿಯಾಳ: ತಾಲೂಕಾ ಕೇಂದ್ರ ಜೋಯಿಡಾ ವಲಯ ವ್ಯಾಪ್ತಿಯ ಜೋಯಿಡಾ ಕೇಂದ್ರದಲ್ಲಿ ನಾಯಿದಾಳಿಗೆ ಒಳಗಾದ ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದೆ.
ಅರಣ್ಯ ಇಲಾಖೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ತಾಲೂಕಾ ಕೇಂದ್ರದ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಪಕ್ಕದ ಕಾಡಿನಿಂದ ನಾಯಿಗಳ ಹಿಂಡು ಜಿಂಕೆಯನ್ನು ಬೆನ್ನಟ್ಟಿ ಬಂದಿದ್ದನ್ನು ಸ್ಥಳೀಯರು ಗಮನಿಸಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಇಲಾಖೆ ಅಧಿಕಾರಿಗಳು ಜಿಂಕೆಯ ಜೀವರಕ್ಷಣೆಗೆ ಧಾವಿಸಿದ್ದಾರೆ. ನಾಯಿ ದಾಳಿಯಿಂದ ಜಿಂಕೆ ರಕ್ಷಣೆ ಮಾಡಿದ್ದಾದರೂ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಜೋಯಿಡಾ ವಲಯ ಅರಣ್ಯ ಅಧಿಕಾರಿ ಪ್ರದೀಪ, ಉ.ವ. ಅರಣ್ಯ ಅಧಿಕಾರಿ ಉಮೇಶ ಇತರರಿದ್ದರು.