ಶಿರಸಿ: ಡಾ. ಕೇಶವ ಎಚ್. ಕೊರ್ಸೆಯವರ 'ಸಹ್ಯಾದ್ರಿ ಕಥನ' ಪುಸ್ತಕವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2020-21ರ ಸಾಲಿನ
ಅತ್ಯುತ್ತಮ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ.
ವಿಜ್ಞಾನ ಮತ್ತು ತಂತ್ರಜ್ನಾನ ವಿಭಾಗದಲ್ಲಿ ಅವರಿಗೆ ಈ ಗೌರವ ಸಂದಿದೆ. ಇವರ ಜೊತೆಗೆ, ಡಾ. ಬಿ. ರೇವತಿ ನಂದನ್ (ವಿಜ್ಞಾನ ಮತ್ತು ತಂತ್ರಜ್ಞಾನ), ಡಾ. ವಸಂತ ತಿಮಕಾಪುರ (ಕೃಷಿ) ಹಾಗೂ ಡಾ. ಕಿರಣ ವಿ.ಎಸ್. (ವೈದ್ಯಕೀಯ) ಇವರುಗಳೂ ಪುರಸ್ಕೃತರಾಗಿದ್ದು, ಒಟ್ಟೂ ನಾಲ್ಕು ಲೇಖಕರ ನಾಲ್ಕು ಪುಸ್ತಕಗಳಿಗೆ ಈ ಪುರಸ್ಕಾರ ಸಂದಿವೆ.
ಸ್ಮೃತಿ ಪ್ರಕಾಶನ' ಪ್ರಕಟಿಸಿರುವ ಡಾ. ಕೇಶವ ಎಚ್. ಕೊರ್ಸೆಯವರ
ಸಹ್ಯಾದ್ರಿ ಕಥನ’ ಗ್ರಂಥವು, ಮಲೆನಾಡಿನ ನೈಸರ್ಗಿಕ ಸಂಪನ್ಮೂಲಗಳ ಉಗಮ, ಹರವು, ಗುಣವಿಶೇಷಗಳು ಹಾಗೂ ಬದುಕನ್ನು ಅವು ಪೆÇೀಷಿಸುವ ಪರಿಯನ್ನು ವಿಶ್ಲೇಷಿಸುವ ಬಹು-ಆಯಾಮಗಳ ಸಮಾಜೋ-ವೈ ಜ್ಞಾ
ನಿಕ ಬರಹಗಳ ಸಂಕಲನವಾಗಿದೆ. ಸುಸ್ಥಿರ ಅಭಿವೃದ್ಧಿ ಮಾರ್ಗಗಳನ್ನು ರೂಪಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ಪಾತ್ರದ ಕುರಿತ ಚಿಂತನೆಗಳೂ ಇದರಲ್ಲಿವೆ.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಯವರು (ಐ.ಎ.ಎಸ್) ಈ ಪ್ರಶಸ್ತಿ ನೀಡಿ ಗೌರವಿಸಿದರು. ಅಕಾಡೆಮಿಯ ಸಭಾಂಗಣದಲ್ಲಿ ನಡೆದ ಇದರ ಪ್ರಧಾನ ಕಾರ್ಯಕ್ರಮದಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಡಾ. ಎಸ್. ಅಯ್ಯಪ್ಪನ್ ಮತ್ತು ಸದಸ್ಯ ಕಾರ್ಯದರ್ಶಿ ಕೆ. ಎಸ್. ಬಸವರಾಜು (ಕೆ.ಎ.ಸ್.) ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವು ವೆಬಿನಾರ್ ಮಾಧ್ಯಮದ ಮೂಲಕ ನಡೆಯಿತಾದ್ದರಿಂದ, ಉಳಿದವರು ಆನ್-ಲೈನ್ ಮಾಧ್ಯಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರೂ ಹಾಗೂ ಪ್ರಸಿದ್ದ ವಿಜ್ಞಾನಿಗಳೂ ಆದ ಡಾ.ಎಚ್. ಎ. ರಂಗನಾಥ, ಡಾ.ಎಸ್. ಕೆ. ಸೈದಾಪುರ, ಡಾ.ಎಚ್ ಎಸ್. ಸಾವಿತ್ರಿ, ಪ್ರಸಿದ್ಧ ವೈದ್ಯಶಿಕ್ಷಣ ತಜ್ಞ ನಾಡೋಜ ಡಾ.ಪಿ.ಎಸ್. ಶಂಕರ್ ಸೇರಿದಂತೆ, ಹಲವಾರು ವಿಜ್ಞಾನಿಗಳು ಹಾಗೂ ವಿಜ್ಞಾನ ಸಂವಹನಗಾರರು ಅತಿಥಿಗಳಾಗಿ ಉಪಸ್ಥಿತರಿದ್ದರು. ಅಕಾಡೆಮಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಎಮ್. ರಮೇಶ ಸ್ವಾಗತಿಸಿದರು. ವಿಜ್ಞಾನಾಧಿಕಾರಿ ಡಾ. ಆರ್. ಆನಂದ್ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.