ಮುಂಡಗೋಡ: ಅಧಿಕಾರಿಗಳ ಸಮ್ಮುಖದಲ್ಲೇ ರೈತ ಮಹಿಳೆಯೊಬ್ಬಳು ವಿಷ ಸೇವಿಸಿ ಸಾಯಲು ಯತ್ನಿಸಿದ ಘಟನೆ ತಾಲೂಕಿನ ಗಡಿ ಭಾಗವಾದ ಹಳವ ತರ್ಲಘಟ್ಟ ಗ್ರಾಮದಲ್ಲಿ ನಡೆದಿದೆ.
ರೈತರು ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ ಜಾಗದಲ್ಲಿ ಸಾಗುವಳಿ ಮಾಡಲು ಮುಂದಾಗಿದ್ದು, ಇದನ್ನು ತಿಳಿದ ಅರಣ್ಯ ಇಲಾಖೆಯ ಆರ್.ಎಫ್.ಒ ಹಾಗೂ ಪಿ.ಎಸ್.ಐ ಸ್ಥಳಕ್ಕೆ ಬಂದು, ಇದು ಅರಣ್ಯ ಇಲಾಖೆಯ ಸ್ಥಳ. ಅತಿಕ್ರಮಣ ಮಾಡಲು ಅವಕಾಶವಿಲ್ಲ ಎಂದು ತಿಳಿ ಹೇಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ರೈತ ಮಹಿಳೆ ಹಾಗೂ ರೈತರು ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಅಧಿಕಾರಿಗಳು ಚಿತ್ರೀಕರಣ ಮಾಡಬೇಡಿ. ನಮ್ಮ ಇಲಾಖೆಯವರು ಮಾಡುತ್ತಾರೆ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದಿದೆ.
ಅಧಿಕಾರಿಗಳ ಮಾತು ಕೇಳ ಮಹಿಳೆ ಮಹಿಳೆ ಚಿತ್ರೀಕರಣ ಮಾಡಲು ಹೋಗಿದ್ದಾಳೆ. ಹೀಗಾಗಿ ಅರಣ್ಯ ಮತ್ತು ಪೆÇಲೀಸ ಸಿಬ್ಬಂದಿಗಳು ಮೊಬೈಲನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ನೊಂದ ಮಹಿಳೆ ವಿಷ ಸೇವಿಸಿ ಸಾಯಲು ಮುಂದಾಗಿದ್ದಾಳೆ ಎನ್ನಲಾಗಿದೆ. ಅಸ್ವಸ್ಥಗೊಂಡ ಮಹಿಳೆಯನ್ನು ಮುಂಡಗೋಡ ಸರಕಾರಿ ತಾಲೂಕಾ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.