• Slide
    Slide
    Slide
    previous arrow
    next arrow
  • ಪಕ್ಷದ ವರಿಷ್ಠರು ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶ; ಬಿ.ವೈ ರಾಘವೇಂದ್ರ

    300x250 AD

    ಶಿರಸಿ: ಪಕ್ಷದ ವರಿಷ್ಠರು, ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪನವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ರವರು ಹೇಳಿದರು.
    ಇಂದು ಶಿರಸಿ ನಗರದ ಗೋಪಾಲಕೃಷ್ಣ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿಪೂಜೆಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿಯಂತೆ, ವರಿಷ್ಠರು ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು. ಇನ್ನು ಪಕ್ಷವು ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೆ ಇಲ್ಲ. ಸಂಘಟನೆ ಅವರನ್ನು ಬೆಳಸಿದೆ, ಸಂಘಟನೆ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಕ್ಷ ಕಟ್ಟಲು ರಾಜ್ಯಾದ್ಯಾಂತ ಪ್ರವಾಸ ಮಾಡುತಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಯಡಿಯೂರಪ್ಪನವರ ನೇತ್ರತ್ವದಲ್ಲಿ ಆಗಲಿದೆ ಎಂದರು.

    ಇನ್ನು ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾದಳಗಳ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು, ಉಮೇಶ್ ಯಡಿಯೂರಪ್ಪ ಅವರ ಕಚೇರಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ.
    ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ ಎಂದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top