ಯಲ್ಲಾಪುರ: ತಾಲೂಕಿನ ದೋಣಗಾರ ದುರ್ಗಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.11 ರಂದು ರಾತ್ರಿ 8.30 ಕ್ಕೆ ಸ್ಥಳೀಯ ಕಲಾವಿದರಿಂದ ‘ಕಾಲನೇಮಿ ಕಾಳಗ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಬೋಡೆ, ಮದ್ದಲೆ ವಾದಕರಾಗಿ ನಾಗಪ್ಪ ಕೋಮಾರ, ಚಂಡೆ ವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಭಾಗವಹಿಸುವರು.
ಎಂ.ಎನ್.ಹೆಗಡೆ ಹಳವಳ್ಳಿ, ಡಾ.ಡಿ.ಕೆ.ಗಾಂವ್ಕಾರ, ರಾಮಕೃಷ್ಣ ಭಟ್ಟ ಮಾಗೋಡ, ಮಹಾಬಲೇಶ್ವರ ಭಟ್ಟ ಘಟ್ಟಿಮನೆ, ಚಂದ್ರಕಲಾ ಭಟ್ಟ ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ.