• Slide
    Slide
    Slide
    previous arrow
    next arrow
  • ಗೋಕರ್ಣದಲ್ಲಿ ಕದಿರು ಹರಣೋತ್ಸವ ಸಂಪನ್ನ

    300x250 AD

    ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಪ್ಲವ ಸಂವತ್ಸರದ ಕದಿರು ಹರಣೋತ್ಸವ ಶಾಸ್ತ್ರೀಯ, ರೂಢಿಗತ ಪರಂಪರೆಯಂತೆ ಇಂದು ಸಂಪನ್ನಗೊಂಡಿತು.

    300x250 AD


    ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಬೆಳಗಿನ ಜಾವ ಸಾರ್ವಭೌಮ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು. ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪ್ರಸಾದ ವಿತರಣೆ ನಡೆಯಿತು. ಉತ್ಸವ ಬರುವ ವೇಳೆ ರೈತರು ತಾವು ಬೆಳೆದ ಫಸಲಿನ ಕದಿರನ್ನು ದೇವರಿಗೆ ಸಮರ್ಪಿಸಿ, ನಂತರ ತಮ್ಮಮನೆಯಲ್ಲಿ ಕದಿರು ಪೂಜೆ ಕೈಗೊಳ್ಳುತ್ತಾರೆ. ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು. ಶ್ರೀ ದೇವಾಲಯದ ನಂದಿ ಮಂಟಪದಲ್ಲಿ ನೂತನ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top