ಕುಮಟಾ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಇದರ ಕುಮಟಾ ಘಟಕದ ವತಿಯಿಂದ ಗಾಂಧಿ ಜಯಂತಿಯ ನಿಮಿತ್ತ ಸ್ವಚ್ಛ ಭಾರತ್ ಸಪ್ತಾಹ ಕಾರ್ಯಕ್ರಮವನ್ನು ಪಟ್ಟಣದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ದೀಪ ಬೆಳಗಿಸುವುದರ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಡಾ.ಆಶೋಕ್ ಭಟ್ ಹಳಕಾರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ಸ್ವಚ್ಛ ಭಾರತದ ಕಲ್ಪನೆಯಂತೆ ಪ್ರತಿಯೊಬ್ಬರೂ ಕೂಡ ತಮ್ಮ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಯ ಬಗ್ಗೆ ತಿಳಿಹೇಳುವುದರ ಜೊತೆಗೆ ಆಸ್ಪತ್ರೆಯ ಆವರಣದ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸಂಸ್ಥೆಯ ಕೋಶಾಧಿಕಾರಿ ಬೀರಣ್ಣ ನಾಯಕ ಮಾತನಾಡಿ, ಹಿಂದಿನವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಈಗಿನ ಸಮಾಜ ನಡೆದುಕೊಂಡರೆ ಜೀವನ ಉಜ್ವಲವಾಗುತ್ತದೆ ಎಂದರು.
ಫ್ಯಾಮಿಲಿ ಪ್ಲಾನಿಂಗ್ ಮ್ಯಾನೇಜರ್ ಸಂತಾನ್ ಲೂಯಿಸ್‍ರವರು ಸ್ವಾಗತಿಸಿದರು. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಪೆÇ್ರೀಗ್ರಾಮ್ ಆಫೀಸರ್ ಮಂಜುಳಾ ಗೌಡ ವಂದಿಸಿದರು. ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು