ಯಲ್ಲಾಪುರ: ತಾಲೂಕಿನ ಹಳಿಯಾಳ ಕ್ರಾಸ್ ಸಮೀಪದ ಸಾತನಕೊಪ್ಪ ತಿರುವಿನಲ್ಲಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗಿಬರುವ ವಾಹನಗಳನ್ನು ನಿಲ್ಲಿಸಿ ಗಾಂಜಾ ಮಾರುತ್ತಿರುವ ಬಗ್ಗೆ ಮಾಹಿತಿ ದೊರೆತು ಯಲ್ಲಾಪುರ ಪೆÇಲೀಸರು ಸ್ಥಳಕ್ಕೆ ಧಾವಿಸಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 354 ಗ್ರಾಂ ಗಾಂಜಾ ಹಾಗೂ 300ರು ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಾಗಿದೆ.
ತಾಲೂಕಿನ ಮಾದೇವಕೊಪ್ಪ ನಿವಾಸಿ ದೊಂಡು ವಿಠ್ಠು ವಿಚ್ಚುಕುಲೆ (34) ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಪೆÇಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿ.ಎಸ್.ಐ ಸುರೇಶ್ ಯಳ್ಳೂರು ನೇತೃತ್ವದಲ್ಲಿ ಪಿಎಸ್‍ಐ ಪ್ರಿಯಾಂಕಾ ನ್ಯಾಮಗೌಡ ಹಾಗು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.