ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್ ಸದಸ್ಯರು ಶಿರಸಿಯ ರಾಮಕೃಷ್ಣ ಸ್ಟೂಡೆಂಟ್ ಹೋಂ ಗೆ ಭೇಟಿ ನೀಡಿ ಅಲ್ಲಿಯ ಕಾರ್ಯಚಟುವಟಿಕೆಗಳಲ್ಲಿ, ಸಾಮೂಹಿಕ ಭಜನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸತ್ಕಾರ್ಯಗಳು ನಿತ್ಯ ನಡೆಯುವಲ್ಲಿನ ಸಾಮಿಪ್ಯ ಆತ್ಮತೃಪ್ತಿ ನೀಡುತ್ತದೆ. ಸಾಮಾಜಿಕ ಒಳಿತಿಗಾಗಿ ಸಂಸ್ಕಾರಯುತ ಯುವ ಸಮಾಜದ ನಿರ್ಮಾಣಕಾರ್ಯವನ್ನು ನಿಸ್ವಾರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರುವ ರಾಮಕೃಷ್ಣ ಸ್ಟುಡೆಂಟ್ ಹೊಂ ಕಾರ್ಯ ಸರ್ವರಿಗೂ ಮಾದರಿ ಹಾಗೂ ಸಾಮಾಜಿಕ ಸೇವಕರಿಗೆಲ್ಲರಿಗೂ ಅನುಕರಣೀಯ ಎಂದು ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಬಸವನ ಕಟ್ಟೆ ನುಡಿದರು.
ರಾಮಕೃಷ್ಣ ಸ್ಟೂಡೆಂಟ್ ಹೋಂ ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆಹಾರ ಧಾನ್ಯಗಳನ್ನು ಶಿರಸಿ ಲಯನ್ಸ ಕ್ಲಬ್‍ನಿಂದ ಸಂಸ್ಥೆಯ ರೂವಾರಿ ಶ್ರೀಮುರಾರಿ ಭಟ್ ಹಾಗೂ ವಿದ್ಯಾರ್ಥಿಗಳಿಗೆ ನೀಡಿ ಕೃತಾರ್ಥಭಾವ ಪಡೆದರು. ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲಯನ್ ಪ್ರೊ. ರವಿ ನಾಯಕ್ ಮತ್ತು ಕುಟುಂಬದವರು ಹಾಗೂ ಲಯನ್ ಜ್ಯೋತಿ ಭಟ್ ರಾಮಕೃಷ್ಣ ಸ್ಟೂಡೆಂಟ್ ಹೋಂ ಗ್ರಂಥಾಲಯಕ್ಕೆ ಧನ ಸಹಾಯ ನೀಡಿದರು. ಶಿರಸಿ ಲಯನ್ಸ್ ಕ್ಲಬ್ ನ ಹಿಂದಿನ ಅಧ್ಯಕ್ಷರಾದ ಲಯನ್ ಡಾ. ಜಿ. ಎ. ಹೆಗಡೆ ಸೊಂದಾ ರವರು ರಾಮಕೃಷ್ಣ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಎಮ್. ಜೆ. ಫ್ ಲಯನ್ ಉದಯ್ ಸ್ವಾಧಿ, ಲಯನ್ಸ್ ಕ್ಲಬ್’ನ ಕಾರ್ಯದರ್ಶಿ ಲಯನ್ ವಿನಯ ಹೆಗಡೆ, ಖಜಾಂಚಿ ಅನಿತಾ ಹೆಗಡೆ, ಸದಸ್ಯರುಗಳಾದ ತ್ರಿವಿಕ್ರಮ ಪಟವರ್ಧನ್, ರಮಾ ಪಟವರ್ಧನ್, ಅಶೋಕ್ ಹೆಗಡೆ, ಶಿರಸಿ ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಉಪಸ್ಥಿತರಿದ್ದರು.