ಯಲ್ಲಾಪುರ: ವಿದ್ಯುನ್ಮಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮಹತ್ವದ ಭಾಗವಾಗಿರುವ ಚುನಾವಣೆಯನ್ನು ನಡೆಸುತ್ತಿರುವುದು ಇಂದಿನ ದಿನದಲ್ಲಿ ಸಾಮಾನ್ಯವಾಗಿದೆ. ಈ ಕುರಿತು ಮುಂದಿನ ಪ್ರಜಾಪ್ರಭುತ್ವದಲ್ಲಿ ಸಕ್ರಿಯ ಪಾಲುದಾರರಾಗಿರುವ ವಿದ್ಯಾರ್ಥಿಗಳಿಗೆ ತಿಳಿಸುವ ವಿನೂತನ ಚುನಾವಣಾ ಮಾಹಿತಿಯನ್ನು EVM ಮತ ಯಂತ್ರದ ಮಾದರಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸುವ ಚುನಾವಣಾ ಅರಿವು ಕಾರ್ಯಕ್ರಮವನ್ನು ಸ್ಥಳೀಯ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಗೆ ತಿಳುವಳಿಕೆ ನೀಡಿ ಶಾಲಾ ಸಂಸತ್ತಿನ ಆಯ್ಕೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ವೆಂಕಟ್ರಮಣ ಭಟ್ಟ, ಎಂ.ರಾಜಶೇಖರ, ನೆಲ್ಸನ್ ಗೊನ್ಸಾಲ್ವಿಸ್, ಪ್ಲೆಂಕಿ ಆಲ್ಪಾನ್ಸೊ, ಮಿಸ್ ಮೀಲಾ ಚುನಾವಣಾ ಕಾರ್ಯದ ಎಲ್ಲಾ ಹಂತಗಳನ್ನು ನಿರ್ವಹಿಸಿದರು. ಮಕ್ಕಳು ಈ ವಿಶೇಷ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಹಾಗೂ ಮಾಹಿತಿಗಾಗಿ ಧನ್ಯವಾದವನ್ನು ತಿಳಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯಾಧ್ಯಾಪಕ ಫಾ.ರೇಮಂಡ್ ಫರ್ನಾಂಡಿಸ್ ಕಾರ್ಯನಿರ್ವಹಿಸಿದರು. ಕಾರ್ಯಕ್ರಮವನ್ನು ಚುನಾವಣಾ ಅರಿವು ಕ್ಲಬ್ ನ ಶಿಕ್ಷಕರಾದ ಜಗದೀಶ ಭಟ್ಟ ಹಾಗೂ ಚಂದ್ರಶೇಖರ ಎಸ್.ಸಿ. ನಿರ್ವಹಿಸಿದರು.
ಶಾಲಾ ಸಂಸತ್ತಿಗೆ ಶ್ರೇಯಾ ರವಿ ಕೈಟಕರ, ಪ್ರತಿಭಾ ಮಂಗಲಚಂದ್ರ ಪಂಡರಪುರ, ಅಯಾನ ಇಸ್ಮಾಯಿಲ್ ಶೇಖ್, ಉಜಮಾ ಗಫಾರಸಾಬ ತಾಂಬೊಳಿ, ಶ್ವೇತಾ ತಿರುಪಾಲ ಮಾದರ, ಪ್ರಜ್ವಲ್ ಶ್ರೀನಿವಾಸ್ ಹೊನ್ನೆಗೌಡ, ದಿಕ್ಷಿತ ನೀಲಕಂಠ ಭೋವಿವಡ್ಡರ, ಪ್ರಥಮ ವಿನಾಯಕ ಪೂಜಾರಿ ಆಯ್ಕೆಯಾದರು.