ಯಲ್ಲಾಪುರ: ತೆರಿಗೆ ಪರಿಷ್ಕರಣೆ ಪ್ರಕ್ರಿಯೆ ಮತ್ತು ಇ-ಸ್ವತ್ತು ಕಾರ್ಯವನ್ನು ಯಶಸ್ವಿಯಾಗಿ ಇಲ್ಲಿಯ ವರೆಗೆ ಗ್ರಾಮ ಪಂಚಾಯತಗಳಲ್ಲಿ ಸಮರ್ಪಕವಾಗಿ ನಿರ್ವಹಿಸದಿರುವ ಕಾರಣ ಈ ಕಾರ್ಯಾಗಾರ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ ಉಪ ಕಾರ್ಯದರ್ಶಿ ಡಿ.ಎಂ ಜಕ್ಕಪ್ಪಗೋಳ ನುಡಿದರು.
ಅವರು ಯಲ್ಲಾಪುರ ತಾಲೂಕಾ ಪಂಚಾಯತ ಸಭಾಭವನದಲ್ಲಿ ಗಟ್ಟದ ಮೇಲಿನ ಐದು ತಾಲೂಕಾ ಅಭಿವೃದ್ಧಿ ಅಧಿಕಾರಿಗಾಳಿಗಾಗಿ ನಡೆದ ತೆರಿಗೆ ಪರಿಷ್ಕರಣೆ ಮತ್ತು ಇ-ಸ್ವತ್ತು ಕುರಿತು ನಡೆದ ಒಂದು ದಿನದ ಕಾರ್ಯಾಗಾರ ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತ ಬಹುತೇಕ ಗ್ರಾಮ ಪಂಚಾತಗಳಲ್ಲಿ ಇ-ಸ್ವತ್ತು ಸಮಸ್ಯೆ ಬಹಳ ಕಾಲದಿಂದ ಇದೆ ನಿಮ್ಮ ಸಮಸ್ಯೆ ಗಳನ್ನು ಕಾರ್ಯಾಗಾರದಲ್ಲಿ ಪರಿಹರಿಸಿ ಕೊಂಡೇ ಹೋಗಿ ಮುಂದೆ ಯಾವುದೇ ಸಬೂಬು ಹೇಳಿದರೆ ನಡೆಯಲ್ಲಾ ಅದಕ್ಕಾಗಿಯೇ ತಜ್ಞ ಸಂಪನ್ಮೂಲ ವ್ಯಕಿಗಳನ್ನು ಕರೆಸಿ ಮಾಹಿತಿ ನೀಡಿದ್ದೇವೆ ಇದರ ಸರಿಯಾದ ಪ್ರಯೋಜನ ಪಡೆದುಕೊಳ್ಳಿ ಎಂದರು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಮಾತನಾಡಿ ಎಲ್ಲರೂ ತರಬೇತಿಯ ಕೊನೆಯವರಿಗೆ ಇದ್ದು ತರಬೇತಿ ಯಶಸ್ವಿಯಾಗಿಸಿ, ಎನಾದರೂ ಸಮಸ್ಯೆ ಇದ್ದರೆ ಹೇಳಿ ಎಂದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೆ.ಜಿ ಜಗದೀಶ ಉಪನಿರ್ದೇಶಕರು ಗ್ರಾಮೀಣಾಭಿವೃದ್ಧಿ ಇಲಾಖೆ ಎಚ್.ವಿ ಲತಾ ಪಿಡಿಒ ತುಮಕೂರ ಜಿಲ್ಲೆ ಉಪಸ್ಥಿತರಿದ್ದರು.
ವ್ಯವಸ್ಥಾಪಕ ಗಂಗಾಧರ ಭಟ್ಟ ಸ್ವಾಗತಿಸಿ ವಂದಿಸಿದರು. ತರಬೇತಿ ಕಾರ್ಯಾಗಾರದಲ್ಲಿ, ಸಿದ್ದಾಪರ, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ ತಾಲೂಕುಗಳ ಅಭಿವೃದ್ದಿ ಅಧಿಕಾರಿಗಳು ಭಾಗವಹಿಸಿದ್ದರು.