ಶಿರಸಿ: ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಇಬ್ಬರು ಅಧ್ಯಾಪಕರು ಪಿ.ಎಚ್.ಡಿ ಪದವಿಯನ್ನು ಕವಿವಿಯ ಘಟಿಕೋತ್ಸವದಲ್ಲಿ ಪಡೆದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ ಶ್ರೀಧರ ಹೆಗಡೆ ಇವರು ಕವಿವಿಯ 70ನೇ ಘಟಿಕೋತ್ಸವದಲ್ಲಿನ ಪದವಿ ಪಡೆದರೆ, ಡಾ. ಸತೀಶಕುಮಾರ ನಾಯ್ಕ ಇವರು 71ನೇ ಘಟಿಕೋತ್ಸವದಲ್ಲಿನ ಪದವಿ ಪಡೆದರು. ಕೋವಿಡ್ ಕಾರಣದಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯವು 70 ಮತ್ತು 71ನೇ ಘಟಿಕೋತ್ಸವವನ್ನು 8ನೇ ಅಕ್ಟೋಬರ್ 21ರಂದು ಜಂಟಿಯಾಗಿ ಆಯೋಜಿಸಿತ್ತು.
ಅಂದು ಬೆಳಿಗ್ಗೆ ಆನ್ ಲೈನ್ ದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ರವರು ವಹಿಸಿದ್ದರೆ, ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ್ ನಾರಾಯಣ ಉಪಸ್ಥಿತರಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಪ್ರೊ. ಎ. ಎಸ್. ಕಿರಣಕುಮಾರ, ಮಾಜಿ ಅಧ್ಯಕ್ಷರು, ಇಸ್ರೋ, ಬೆಂಗಳೂರು, ಇವರು ಪಾಲ್ಗೊಂಡಿದ್ದರು.
ಮಧ್ಯಾಹ್ನ ನಡೆದ ಆಫ್ ಲೈನ್ ಕಾರ್ಯಕ್ರಮದಲ್ಲಿ ಕವಿವಿಯ ಕುಲಪತಿಗಳಾದ ಡಾ. ಕೆ. ಬಿ. ಗುಡಸಿಯವರು ಪದವಿ ಪ್ರದಾನ ಮಾಡಿದರು. ಘಟಿಕೋತ್ಸವದ ಮುಂದುವರೆದ ಭಾಗವಾಗಿ 9ನೇ ಅಕ್ಟೋಬರ್21 ರಂದು ನಡೆದ ಸಮಾರಂಭದಲ್ಲಿ ಎಂ.ಎಂ ಕಾಲೇಜಿನಲ್ಲಿ ಕಳೆದ ವರ್ಷ ಬಿ.ಎಸ್ಸಿ.ಯಲ್ಲಿ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನ ಪಡೆದ ಶ್ರೀದೇವಿ ಆರ್. ಹೆಗಡೆ ಇವಳು ಒಟ್ಟೂ ಐದು ಬಂಗಾರದ ಪದಕಗಳನ್ನು ಪಡೆದುಕೊಂಡು ಮಹಾವಿದ್ಯಾಲಕ್ಕೆ ಕೀರ್ತಿತಂದಳು. 2018-19 ನೇ ಸಾಲಿನಲ್ಲಿ ಕು ಮಿಥಿಲಾ ಹೆಗಡೆ ಹಾಗೂ 2019-20 ನೇ ಸಾಲಿನಲ್ಲಿ ಧನ್ಯಾ ಹೆಗಡೆ ಸಂಗೀತ ವಿಷಯದಲ್ಲಿಒಂದೊಂದು ಚಿನ್ನದ ಪದಕವನ್ನು ಪಡೆದುಕೊಂಡರು.
ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಈ ಸಾಧನೆಗಳನ್ನು ಎಂ.ಇ.ಎಸ್ ನ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಾಚಾರ್ಯಲರು ಮತ್ತು ಅಧ್ಯಾಪಕ ವೃಂದ ಬೋಧಕೇತರ ಸಿಬ್ಬಂದಿಗಳು ಶ್ಲಾಘಿಸಿದರು.