ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಅಂಗವಾಗಿ ಅ.8ರ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಲಯನ್ಸ್ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು `ಭವಿಷ್ಯತ್ತಿಗಾಗಿ ಆಹಾರ’ ಪೋಷಣಾ ಸಪ್ತಾಹ ಕಾರ್ಯಕ್ರಮವನ್ನು ಲಯನ್ಸ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಪರಿಸರ ತಜ್ಞರಾದ ಡಾ. ಕೇಶವ ಹೆಗಡೆ ಚಾಲನೆ ನೀಡಿದರು. ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥಗಳ ಮಾಹಿತಿ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಯಾವ ಯಾವ ರೀತಿಯ ವಿವಿಧ ಆಹಾರ ಪದಾರ್ಥ ಸೇವಿಸುವುದು ಸೂಕ್ತ ಎನ್ನುವುದನ್ನು ಕಲಾಪ್ರಕಾರಗಳ ಮೂಲಕ ಪ್ರದರ್ಶಿಸಿದರು.
ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲಯನ್ ಪ್ರೋ. ರವಿ ನಾಯಕ, ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಎಮ್‍ಜೆಎಫ್ ಲಯನ್ ಉದಯ ಸ್ವಾದಿ ಹಾಗೂ ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಹಾಗೂ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಉಪಸ್ಥಿತರಿದ್ದರು. ಗೈಡ್ಸ್ ಕ್ಯಾಪ್ಟನ್ ಚೇತನಾ ಪಾವಸ್ಕರ್ ಹಾಗೂ ಸ್ಕೌಟ್ಸ್ ಮಾಸ್ಟರ್ ರಾಘವೇಂದ್ರ ಹೊಸೂರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.