ಶಿರಸಿ: ಇಲ್ಲಿನ ಕರೋಕೆ ಸ್ಟುಡಿಯೋ ಹಾಗೂ ಕದಂಬ ಕಲಾ ವೇದಿಕೆ ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗಾನ ಗಂಧರ್ವ ಡಾ.ಎಸ್ಪಿಬಿ ಹಾಗೂ ಕಲಾರಾಧಕ ಶಂಕರ್ ನಾಗ್ ರವರ ಪುಣ್ಯಸ್ಮರಣಾರ್ಥ ಸಂಗೀತ ಸ್ವರನಮನ ‘ಗೀತಾಂಜಲಿ’ ಕಾರ್ಯಕ್ರಮವನ್ನು ಆಯೋಜಿಸಿದೆ.
ಅ.10 ರ ರವಿವಾರ ಸಂಜೆ 4.30ರಿಂದ ನಗರದ ಎ.ಪಿ.ಎಮ್.ಸಿ ಯಾರ್ಡ್ ನ ಪೂಗಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಿರಸಿ ಮಿತ್ರಾ ಮ್ಯೂಸಿಕ್’ನ ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿರವರು ಹಾಗೂ ಶಿರಸಿ ಲಕ್ಷ್ಮೀ ಚ್ಯಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಂಗಲಾ ನಾಯ್ಕ ಜಂಟಿಯಾಗಿ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ಕರೋಕೆ ಸ್ಟುಡಿಯೋ ಹಾಗೂ ಕದಂಬ ಕಲಾ ವೇದಿಕೆ ಶಿರಸಿಯ ಶಿರಸಿ ರತ್ನಾಕರ ವಹಿಸಿಕೊಳ್ಳಲಿದ್ದು, ಗಾನ ಸನ್ಮಾನಕ್ಕೆ ಖ್ಯಾತ ಗಾಯಕಿ ಶೀಲಾ ಹೇಮಂತ್ ಭಾಜನರಾಗಿದ್ದಾರೆ. ಮುಖ್ಯ ಅತಿಥಿಗಳಾಗಿ ವಿನಾಯಕ ಶೇಟ್, ಡಾ. ಮಹೇಶ್ ಭಟ್, ರಾಜು ಭಟ್ ಕಾನ್ಸೂರ್, ರಾಜು ಮಧುಕರ್ ಶೇಟ್, ಸುಪ್ರಿಯಾ ನಾಯ್ಕ ಹಾಗೂ ಉಮಾಕಾಂತ ಗೌಡ ಉಪಸ್ಥಿತರಿರುವರು.
ಪ್ರದೀಪ್ ಜ್ಯುವೆಲರ್ಸ್ ಸಿಂಪಿಗಲ್ಲಿ ಹಾಗೂ ಶೇಟ್ ಕನ್ಸಲ್ಟಂಟ್ ಇಸಳೂರು ಇವರ ಸಹ ಪ್ರಾಯೋಜಕತ್ವದಲ್ಲಿ ಜರುಗುವ ಈ ಸಂಗೀತ ಕಾರ್ಯಕ್ರಮದ ಮುದ್ರಿತ ಕಾರ್ಯಕ್ರಮ ಮೀಡಿಯಾ ಪಾಟ್ರ್ನರ್ ಶ್ರೀ ಮಾರಿಕಾಂಬಾ ಡಿಜಿಟಲ್ ಟಿವಿಯಲ್ಲಿ ಪ್ರಸಾರವಾಗುವುದು. ಸ್ವರ ನಮನದಲ್ಲಿ ಶಿರಸಿ ಕರೋಕೆ ಸ್ಟುಡಿಯೋದ 30 ಜನ ಗಾಯಕರು ಭಾಗವಹಿಸುವುದು ವಿಶೇಷವಾಗಿದೆ ಎಂದು ಕರೋಕೆ ಸ್ಟುಡಿಯೋದ ಶಿರಸಿ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.