ಶಿರಸಿ: 2021-22ನೇ ಸಾಲಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಟೀ, ಕಾಫಿ ಮತ್ತು ರಬ್ಬರ್ ಬೆಳೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಘಟಕವನ್ನು ಅನುಮೋದಿತ ಸೂಕ್ಷ್ಮ ನೀರಾವರಿ ಸಂಸ್ಥೆಗಳಿಂದ ಅಳವಡಿಕೆ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮಾರ್ಗಸೂಚಿ ಪ್ರಕಾರ ಗರಿಷ್ಠ 5.00 ಹೆಕ್ಟೇರ್ ಗಳವರೆಗೆ (ತರಕಾರಿ ಮತ್ತು ಪುಷ್ಪ ಬೆಳೆಗಳಿಗೆ ಗರಿಷ್ಠ 2.00 ಹೆಕ್ಟೇರ್) ಸಹಾಯಧನ ಲಭ್ಯವಿರುತ್ತದೆ ಎಂದು ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಜಿ.ಪಂ ಉತ್ತರ ಕನ್ನಡ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಣ್ಣ, ಅತಿ ಸಣ್ಣ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ರೈತರಿಗೆ 2.00 ಹೆಕ್ಟೇರ್ ಗಳವರೆಗೆ 90% ಸಹಾಯಧನ- ಉಳಿಕೆ 3.00 ಹೆಕ್ಟೇರ್ ಗಳಿಗೆ 45% ಸಹಾಯಧನ, ದೊಡ್ಡ ರೈತರಿಗೆ ಒಟ್ಟಾರೆ 5.00 ಹೆಕ್ಟೇರ್ ಗಳವರೆಗೆ 45% ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.