• Slide
    Slide
    Slide
    previous arrow
    next arrow
  • ಮನೆಯಂಗಳದಲ್ಲಿಯೇ ರೆಡಿಯಾಯ್ತು ಬಣ್ಣದ ಹೂಗಳ ಕೈದೋಟ

    300x250 AD

    eUK ವಿಶೇಷ: ಹೂವಿನ ಅಂದಕ್ಕೆ ಮನಸೋಲದವರು ಯಾರೂ ಇಲ್ಲ. ಅದರಲ್ಲೂ ಮಹಿಳೆಯರಿಗೆ ಹೂವೆಂದರೆ ಅಚ್ಚುಮೆಚ್ಚು. ವಿವಿಧ ತಳಿಯ ಹೂವಿನ ತಳಿಗಳನ್ನು ಬೆಳೆಸಿ ಆನಂದ ಕಾಸುತ್ತಾರೆ.  ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲೂ  ಕೈತೋಟ ಹೆಚ್ಚು ಜನಪ್ರೀಯವಾಗುತ್ತಿದೆ. ಸ್ಥಳಾವಕಾಶದ ಕೊರತೆ ಇದ್ದರೂ ಹ್ಯಾಂಗಿಂಗ್ ಪಾಟ್ ಗಳಲ್ಲಿ ಗಿಡನೆಟ್ಟು ಖುಷಿ ಪಡುತ್ತಾರೆ‌.

    ಇಂತಹಾ ಗಾರ್ಡನ್ ಪ್ರಿಯರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸವಿತಾ ಗಾಂವ್ಕರ್ ಸಹಾ ಒಬ್ಬರು. ಹವ್ಯಾಸಕ್ಕೋಸ್ಕರ ಹೂಗಿಡ ಬೆಳೆಸಲು ಆರಂಭಿಸಿದ ಸವಿತಾ ಅದರಿಂದ ಸಣ್ಣ ಆದಾಯವನ್ನೂ ಗಳಿಸುತ್ತಿದ್ದಾರೆ.
    ಹಾಲಿ ಅವರ ಮನೆಯಂಗಳದಲ್ಲಿ 500 ಕ್ಕೂ ಹೆಚ್ಚು ವಿವಿಧ ತಳಿಯ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಅವರ ಮನೆಗೆ ಬರುವ ಎಲ್ಲರೂ ಹೂವಿ‌ನ ತೋಟ ಕಂಟು ಆಕರ್ಷಿತರಾಗುತ್ತಾರೆ. ಅಲ್ಲದೇ ಗಿಡಗಳನ್ನು ಪಡೆದು. ಇದರಿಂದ ಸಣ್ಣ ಮಟ್ಟದ ಗಳಿಕೆಯೂ ಸಾಧ್ಯವಾಗಿದೆ ಎನ್ನುತ್ತಾರೆ ಸವಿತಾ.

    ಅಪರೂಪದ ತಳಿಯ ಹೂವಿ‌ನ ಬಳ್ಳಿಗಳು, ಬಣ್ಣದ ಗಿಡಗಳನ್ನು ಅವರು ಸಂಗ್ರಹಿಸಿದ್ದಾರೆ. ದಾಸವಾಳ, ಜರ್ಬೆರಾ, ಶಂಖಪುಷ್ಪ, ನಾಗದಾಳಿ, ಆರ್ಕಿಡ್ ಹೂವುಗಳೂ ಅವರ ಮನೆಯಂಗಳದಲ್ಲಿವೆ. ಮುಂದಿನ ದಿ‌ನಗಳಲ್ಲಿ ಮನೆ ಒಳಗೂ ಇವುಗಳನ್ನು  ಬೆಳೆಸುವ ಇರಾದೆ ಅವರದ್ದು. ಮನೆಕೆಲಸದ ಜತೆ ಜತೆಗೆ ಬಿಡುವಿನ ವೇಳೆಯನ್ನ ಗಿಡಗಳ ಜತೆ ಕಳೆಯುವ ಸವಿತಾ, ಇವುಗಳನ್ನು ಸಾವಯವ ಗೊಬ್ಬರದಲ್ಲೇ ಬೆಳೆಸುತ್ತಾರೆ. ಕಡಿಮೆ ನೀರಿನಲ್ಲಿ ಹಿಡಬೇಳೆಸುವ ಕ್ರಮವನ್ನೂ ಕರಗತಮಾಡಿಕೊಂಡಿದ್ದಾರೆ. ಸದಾಕಾಲ ಟಿವಿ ಮುಂದೆ ಕಾಲ ಹರಣ ಮಾಡುವ ಬದಲು ಗಿಡಗಳೊಂದಿಗೆ ಬೆರೆತಾಗ ಸಿಗುವ ಆನಂದವೇ ಬೇರೆ ಎಂನ್ನುವುದು ಅವರ ಅಭಿಪ್ರಾಯ.

    300x250 AD

    ಒಟ್ಟಿನಲ್ಲಿ ಒತ್ತಡದ ಬದುಕಿಗೆ ಸಿಲುಕಿದ ಮನಗಳು  ಇವುಗಳಿಂದ ಹೊರಬರಲು ಕೈ ತೋಟ ನಿರ್ಮಾಣಕ್ಕೆ ಮುಂದಾಗುತ್ತಿರುವ ಸಮಯದಲ್ಲಿ ಸವಿತಾ ಅಂತಹವರು ಸ್ಪೂರ್ತಿಯಾಗಬಲ್ಲರು.

    ಈ ಸುದ್ದಿಯನ್ನು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಹ ವೀಕ್ಷಿಸಬಹುದಾಗಿದೆ.
    https://youtu.be/pFICWC7lFbs

    Share This
    300x250 AD
    300x250 AD
    300x250 AD
    Leaderboard Ad
    Back to top