ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2021-22ನೇ ಸಾಲಿನ ವಿಶೇಷ ಘಟಕ, ಗಿರಿಜನ ಉಪಯೋಜನೆ, ಸಾಮಾನ್ಯ ಯೋಜನೆಯಡಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ನೋಂದಾಯಿತ ಸಂಘ ಸಂಸ್ಥೆಗಳ ಕಲಾವಿದರು ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮ ಪಡೆಯಬೇಕಾದಲ್ಲಿ ಕಾರ್ಯಕ್ರಮ ನಡೆಯುವ 15 ದಿನದ ಮುಂಚಿತವಾಗಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಹಾಗೂ ಕಲಾ ತಂಡದ ಆ್ಯಪ್ ಇನ್ವಾಲ್ ಮಾಡಿಕೊಂಡು ಕಾರ್ಯಕ್ರಮದ ದಿನಾಂಕ ಹಾಗೂ ಛಾಯಾ ಚಿತ್ರವನ್ನು ಆ್ಯಪ್ ಮೂಲಕ ಜಿಪಿಎಸ್ ಮಾಡಬೇಕು. ಜಿಲ್ಲೆಯ ಎಲ್ಲ ನೋಂದಾಯಿತ ಸಂಘ ಸಂಸ್ಥೆಯ ಕಲಾವಿದರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ ನಾಯ್ಕ ತಿಳಿಸಿದ್ದಾರೆ.