Slide
Slide
Slide
previous arrow
next arrow

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ

300x250 AD

ನವರಾತ್ರಿ ವಿಶೇಷ: ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ, ಅನ್ಯಾಯವು ಅತಿಯಾಗಿ, ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗೆ ಮಾತೆ, ದುರ್ಗೆಯು ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳಲ್ಲಿ ಇದೆ. ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯು ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ಆ ದಿನಗಳು ವರ್ಷದ ನವರಾತ್ರಿ ಹಬ್ಬ.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ:
ನವದುರ್ಗೆಯರಲ್ಲಿ ಬ್ರಹ್ಮಚಾರಿಯದ್ದು ಎರಡನೆಯ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆ ಜ್ಞಾನ ಕೊಟ್ಟವಳು, ಬ್ರಹ್ಮಚಾರಿಣಿಯದ್ದು ಸಾತ್ವಿಕ ಸುಂದರ ರೂಪ, ಬ್ರಹ್ಮಚಾರಿಣಿಯ ರೂಪ ಅತ್ಯಂತ ವಿಶಿಷ್ಟವಾದದ್ದು. ಇವಳು ಪೂರ್ಣ ಜ್ಯೋತಿರ್ಮಯ ಸ್ವರೂಪ, ಕೈಯಲ್ಲಿ ಜಪಮಾಲೆ, ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ, ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರುತ್ತಾಳೆ. ಶಿವನನ್ನು ಪಡೆಯುವುದಕ್ಕೆ ಬ್ರಹ್ಮಚಾರಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡುತ್ತಾಳೆ. ತಪಸ್ಸನ್ನು ಮಾಡಿದ ಸಲುವಾಗಿ ಸದಾ ಧ್ಯಾನದಲ್ಲಿ ತಲ್ಲೀನಳಾಗಿರುತ್ತಾಳೆ.

300x250 AD

ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದರೆ ವಿಶೇಷ ವರಗಳು ಸಿಗುತ್ತವೆ. ಸದಾ ಧ್ಯಾನಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ, ನಿತ್ಯ ಕಲ್ಮಶವಿಲ್ಲದ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದರೆ ಬೇಡಿದ ವರಗಳನ್ನು ಕರುಣಿಸುತ್ತಾಳೆ. ಬ್ರಹ್ಮಚಾರಿಣಿಯ ಆರಾಧನೆಯಿಂದ ಪೂಜೆಯ ಫಲಗಳು ಅನಂತವಾದವು. ಬ್ರಹ್ಮಚಾರಿಣಿ ತನ್ನನ್ನು ಪೂಜಿಸುವ ಭಕ್ತರಿಗೆ ಅನಂತ ಫಲಗಳನ್ನು ನೀಡುತ್ತಾಳೆ. ಇವಳ ಉಪಾಸನೆಯಿಂದ ಆಧ್ಯಾತ್ಮ ಸಾಧನೆ ಮಾಡಬಹುದು. ಇವಳ ಆರಾಧನೆಯಿಂದ ತ್ಯಾಗ ಮನೋಭಾವ, ವೈರಾಗ್ಯ, ಸದಾಚಾರ ಮತ್ತು ಸಂಯಮ ವೃದ್ಧಿಯಾಗುತ್ತದೆ. ಮನಸ್ಸು ಏಕಾಗ್ರತೆಯನ್ನು ಸಾಧಿಸುತ್ತದೆ. ಮನಸ್ಸು ಏಕಾಗ್ರತೆಯಲ್ಲಿ ಇರುತ್ತದೆ. ಇವಳ ಅನುಗ್ರಹವಿದ್ದರೆ ಸಕಲ ಕಾರ್ಯದಲ್ಲಿ ಜಯ ಸಾಧಿಸಬಹುದು. ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆಯನ್ನು ಮಾಡುತ್ತಾರೆ ಎಂದು ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಈ ಚಕ್ರದಲ್ಲಿ ನೆಲೆನಿಂತ ಮನಸ್ಸುಳ್ಳ ಯೋಗಿಯೂ ಬ್ರಹ್ಮಚಾರಿಣಿಯ ಆಶೀರ್ವಾದಕ್ಕೆ ಪಾತ್ರನಾಗುತ್ತಾನೆ

ಬ್ರಹ್ಮಚಾರಿಣಿ ಪೂಜಾ ಮಂತ್ರ:
ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ,
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ||

Share This
300x250 AD
300x250 AD
300x250 AD
Back to top