ಶಿರಸಿ: ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ವಿಶೇಷ ಕಾರ್ಯಾಚರಣೆಯನ್ನು ಶಿರಸಿ ಉಪವಿಭಾಗದಲ್ಲಿ ಗುರುವಾರ ಕೈಗೊಳ್ಳಲಾಗಿದ್ದು, ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಒಟ್ಟೂ 211 ಪ್ರಕರಣ ದಾಖಲಿಸಿ, ₹1,07,000 ರಷ್ಟು ದಂಡ ವಿಧಿಸಲಾಗಿದೆ.
ಶಿರಸಿ ಉಪವಿಭಾಗದ ಎಲ್ಲಾ 7 ಪೊಲೀಸ್ ಠಾಣೆಗಳಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಡಿಎಸ್ಪಿ ರವಿ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಕೈಗೊಂಡಿದ್ದು, ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.