ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಭಾರಿ ಮಳೆಯಾಗಿದ್ದು, ಜನಜೀವನ ತತ್ತರಗೊಳ್ಳುವಂತಾಯಿತು.
ಏಕಾಏಕಿ ಭಾರಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದು ತೋಟ, ಗದ್ದೆಗಳು ಜಲಾವ್ರತವಾದವು. ಈರಾಪುರ, ದೇವಸ, ನಂದೊಳ್ಳಿ, ಕಾರಕುಂಕಿ, ಮಾಗೋಡ, ಇಡಗುಂದಿ, ವಜ್ರಳ್ಳಿ ಮುಂತಾದ ಭಾಗಗಳಲ್ಲಿ ಹಳ್ಳದ ನೀರು ತೋಟ, ಗದ್ದೆಗಳಿಗೆ ನುಗ್ಗಿ ಹಾನಿ ಉಂಟಾಗಿದೆ.
ಪಟ್ಟಣದಲ್ಲೂ ಮಳೆಯಿಂದಾಗಿ ಭಾರಿ ಅವಾಂತರ ಉಂಟಾಗಿದ್ದು, ಗಟಾರದ ನೀರು ರಸ್ತೆಯ ಮೇಲೆ ಹರಿದು ತೊಂದರೆ ಉಂಟಾಯಿತು.