ಯಲ್ಲಾಪುರ: ಪಟ್ಟಣದ ತರಕಾರಿ ಮಾರುಕಟ್ಟೆ ಸಮೀಪದ ಯೋಗಿ ಟಾಪರ್ಸ್ ಪಾಯಿಂಟ್’ನಲ್ಲಿ ತರಬೇತಿ ಪಡೆದು, ನವೋದಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೂವರು ವಿದ್ಯಾರ್ಥಿಗಳನ್ನು ಯೋಗಿ ಟಾಪರ್ಸ್ ಪಾಯಿಂಟ್ ವತಿಯಿಂದ ಪುರಸ್ಕರಿಸಲಾಯಿತು.
ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ತನುಶ್ರೀ ಪಮ್ಮಾರ, ದಿಶಾ ರೇವಣಕರ್ ಹಾಗೂ ಸೃಷ್ಟಿ ದೇವಕರ್ ಅವರನ್ನು ಸಂಸ್ಥೆಯ ಮುಖ್ಯಸ್ಥ ಯೋಗೇಶ ಶಾನಭಾಗ ಪುರಸ್ಕರಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಕೇಂದ್ರದಲ್ಲಿ ಎರಡು ವರ್ಷಗಳಿಂದ ನವೋದಯ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದ್ದು, ಈ ಬಾರಿ ತರಬೇತಿ ಪಡೆದ 40 ವಿದ್ಯಾರ್ಥಿಗಳ ಪೈಕಿ 3 ಜನ ಆಯ್ಕೆಯಾಗಿದ್ದಾರೆ. ತಾಲೂಕಿನಿಂದ ಆಯ್ಕೆಯಾದ 4 ವಿದ್ಯಾರ್ಥಿಗಳಲ್ಲಿ ಮೂವರು ನಮ್ಮ ಕೇಂದ್ರದಲ್ಲಿ ತರಬೇತಿ ಪಡೆದಿರುವುದು ಅಭಿಮಾನದ ಸಂಗತಿ ಎಂದರು. ಶಿಕ್ಷಕ ಗಂಗಾಧರ.ಎಸ್.ಎಲ್, ಉದಯ ದೇವಕರ್ ಇತರರಿದ್ದರು.