ಶಿರಸಿ: ಬೆಂಗಳೂರಿನ ಅನುಗ್ರಹ ಲೇಔಟ್ 3 ನೇ ಸ್ಟೇಜ್ ನಿವಾಸಿಯಾದ ವಿಶ್ವೇಶ್ವರ ಕೇಶವ ಭಟ್‌ಗೆ ವಜ್ರದ ಹಾರ ಕೊಡಿಸುವುದಾಗಿ ನಂಬಿಸಿ ವಂಚಿಸಿದನೆoದು ಕಸ್ತೂರ ಬಾ ನಗರದ ಫಯಾಜ್ ಚೌಟಿ ಮೇಲೆ ದೂರು ದಾಖಲಾಗಿದೆ.
ವಜ್ರದ ಹಾರವನ್ನು ಕೊಡುವುದಾಗಿ ನಂಬಿಸಿ 20 ಲಕ್ಷ ಮಾತುಕತೆ ಮಾಡಿಕೊಂಡು 19. 10 ಲಕ್ಷ ರೂ. ಹಣವನ್ನು ಖಾತೆಗೆ ಹಾಕಿಸಿಕೊಂಡು ವಜ್ರದ ಹಾರವನ್ನು ನೀಡದೆ ನಂಬಿಸಿ ಮೋಸ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು,ಫಯಾಜ್ ಚೌಟಿ ಜೊತೆಗೆ ನಗರದ ಭೀಮನಗುಡ್ಡದ ಸಲ್ವಾಡಾರ್ ಡಿಸೋಜ ಅವರ ಮೇಲೂ ಪ್ರಕರಣ ದಾಖಲಾಗಿದೆ.
ಮಾರುಕಟ್ಟೆ ಠಾಣೆ ಪಿಎಸ್‌ಐ ಭೀಮಾಶಂಕರ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.