ಅಂಕೋಲಾ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಖರೀದಿಸಿದ ಅಂಬುಲೆನ್ಸ್ 130 ದಿನಗಳ ನಂತರ (4 ತಿಂಗಳು) ಅ.6 ಬುಧವಾರ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದೆ.
ಕಳೆದ ಮೇ 28 ಕ್ಕೆ ಅಂಬುಲೆನ್ಸ್ ಉದ್ಘಾಟನೆಗೊಂಡಿತ್ತು. 100 ದಿನ ಕಳೆದರೂ ಆಸ್ಪತ್ರೆಗೆ ಹಸ್ತಾಂತರಗೊಳ್ಳದ ಅಂಬುಲೆನ್ಸ್ ನಿಂದಾಗಿ ಜನರು ಬೇಸರಿಸುತ್ತಿದ್ದರು. ಇಂದು ಅಂಬುಲೆನ್ಸ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಈ ಭಾಗದ ಜನರ ಸೇವೆಗೆ ಸಿದ್ಧವಾಗಿದೆ.