Slide
Slide
Slide
previous arrow
next arrow

ದುರ್ಗೆಯ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ; ಮೊದಲ ದಿನ ಶೈಲಪುತ್ರಿ ಪೂಜೆ

300x250 AD

ನವರಾತ್ರಿ ವಿಶೇಷ: ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು ದಿನಗಳ ಕಾಲ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಆಶ್ವೀಜ ಮಾಸದ ನವರಾತ್ರಿಯನ್ನು ಶರನ್ನವರಾತ್ರಿ ಎಂದು ಕರೆಯಲಾಗುತ್ತದೆ. ನವರಾತ್ರಿಯೆಂದರೆ ಒಂಭತ್ತು ರಾತ್ರಿಗಳು, ದೇವಿಯ ಒಂಭತ್ತು ವಿಧದ ರೂಪಗಳನ್ನು ಒಂಭತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ.

ನವರಾತ್ರಿಯ ಹಿನ್ನಲೆ: ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ಆದಿ ಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಾಮಾಯೆ ಹಾಗೂ ಮಹಿಷಾಸುರ ಮರ್ದಿನಿ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯಲ್ಲಿ ನವದುರ್ಗೆಯರ ಪೂಜೆ. ನವರಾತ್ರಿಯ ಒಂಬತ್ತು ದಿನ ದುರ್ಗೆಯ ಒಂಬತ್ತು ರೂಪಗಳ ಪೂಜೆ. ನವರಾತ್ರಿಯ ಪ್ರಥಮ ದಿನ ಶೈಲಪುತ್ರಿಯ ಪೂಜೆ. ಶರನ್ನವರಾತ್ರಿಯ ದಿನ ಒಂದೊಂದು ದಿನ ಒಂದೊಂದು ಶಕ್ತಿ ದೇವತೆಯ ಆರಾಧನೆಯನ್ನು ಮಾಡಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನ ಆರಾಧಿಸಲಾಗುತ್ತದೆ. ದೇವಿಯ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ. ನವರಾತ್ರಿಯ ಒಂಬತ್ತು ದಿನ ದುರ್ಗೆಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ನವರಾತ್ರಿಯ ಒಂದೊಂದು ದಿನವೂ ಅತ್ಯಂತ ಮಹತ್ವವಿದೆ.

300x250 AD

ಶೈಲ ಪುತ್ರಿ: ನವರಾತ್ರಿಯ ಮೊದಲನೇ ದಿನವನ್ನು ಪ್ರತಿಪಾದ ಎಂದು ಕರೆಯುತ್ತಾರೆ.ಈ ದಿನ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು ಎಂದರ್ಥ, ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ.
ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ತಂದೆಯು ಅವಮಾನ ಮಾಡಿದ್ದಕ್ಕಾಗಿ ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈಯುತ್ತಾಳೆ. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆಯುತ್ತಾಳೆ. ಆದರೆ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿ ಹೋದ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ 16 ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆದಳು.

Share This
300x250 AD
300x250 AD
300x250 AD
Back to top