ಶಿರಸಿ: ದೇವತೆಮನೆ ಶ್ರೀ ಲಲಿತಾ ಭದ್ರಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಗುರುವಾರ ಅ. 7 ರಿಂದ ಆರಂಭವಾಗಲಿದೆ. ಅ. 15 ರವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ಜರುಗಲಿದೆ.
ಅ.10 ರವಿವಾರ ಶ್ರೀ ಲಲಿತಾ ಪಂಚಮಿಯಂದು ‘ಕುಂಕುಮಾರ್ಚನೆ’ ಕಾರ್ಯಕ್ರಮ ನಡೆಯಲಿದೆ. ಅ.19ರಂದು ಸ್ವರ್ಣವಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ‘ಶ್ರೀ ನವ ಚಂಡಿ ಹೋಮ’ ‘ರುದ್ರಾಭಿಷೇಕ’ ವಾರ್ಷಿಕೋತ್ಸವ ಹಾಗೂ ಶ್ರೀ ಶ್ರೀಗಳವರ ಪಾದುಕಾ ಪೂಜೆ ಮತ್ತು ಭಿಕ್ಷಾ ಕಾರ್ಯಕ್ರಮ ಜರುಗಲಿದೆ ಭಕ್ತರು ತನು- ಮನ- ಧನ ಸಹಾಯ ಮಾಡಿ, ಆಗಮಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.