ಹೊನ್ನಾವರ: ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು, ಲೈಪ್ ಗಾರ್ಡಗಳು ರಕ್ಷಿಸಿದ ಘಟನೆ ಇಲ್ಲಿನ ಕಾಸರಕೋಡಿನ ಇಕೋ ಬೀಚ್ ನಲ್ಲಿ ನಡೆದಿದೆ.
ಮಂಜುಳಾ ಬಿರಾದಾರ್ (20), ಲಕ್ಷ್ಮಣ ಬಿರಾದಾರ್ (28) ರಕ್ಷಣೆಗೊಳಗಾದವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಇವರು ಕುಟುಂಬ ಸಮೇತರಾಗಿ ಒಟ್ಟು ಹತ್ತು ಜನರು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಇಕೋ ಬೀಚ್ ನಲ್ಲಿ ಸಮದ್ರದಲ್ಲಿ ಆಟವಾಡುತಿದ್ದು ಅಲೆಗೆ ಈಜಲಾಗದೇ ಮುಳಗಿದ್ದರು. ತಕ್ಷಣದಲ್ಲಿ ಇವರ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.