ಯಲ್ಲಾಪುರ: ವ್ಯಕ್ತಿಯೊಬ್ಬನನ್ನು ಚಾಕು ತೋರಿಸಿ ಬೆದರಿಸಿ ಹಣ ದೋಚಿಕೊಂಡು ಹೋದ ಪ್ರಕರಣವನ್ನು ಬೆನ್ನಟ್ಟಿದ ಪೋಲಿಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಶಾರದಾಂಬಾ ದೇವಸ್ಥಾನದ ಸಮೀಪ ಆ.3ರಂದು ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ 3500ರೂಪಾಯಿ ನಗದನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಡಿ ಸಬಗೇರಿಯ ಪ್ರಸನ್ನಕುಮಾರ ಸಂತೋಷ ಜಾದವ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರಿಂದ 1240ರೂ.ಗಳು ಹಾಗೂ 35ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್’ನ್ನು ಪೋಲಿಸರು ವಶ ಮಾಡಿಕೊಂಡಿದ್ದಾರೆ.
ರವಿ ನಾಯ್ಕ ಡಿ.ಎಸ್.ಪಿ ಇವರ ಮಾರ್ಗದರ್ಶನದಲ್ಲಿ ಸುರೇಶ್ ಯಳ್ಳುರ, ಪಿ.ಎ ಯಲ್ಲಾಪುರ ಪೋಲಿಸ್ ಠಾಣೆ ಇವರ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ ಗೌಡರ್, ಪಿಎಸ್‌ಐ ಪ್ರಿಯಾಂಕಾ ನ್ಯಾಮಗೌಡ ಹಾಗೂ ಸಿಬ್ಬಂದಿಗಳಾದ ಮಹಮ್ಮದ ಶಫೀ, ಬಸವರಾಜ ಹಗರಿ, ಗಜಾನಾನ ನಾಯ್ಕ್, ರಾಜೇಶ ನಾಯಕ, ಮಂಜಪ್ಪ ಪೂಜಾರ, ಸಂತೋಷ ನಾಯ್ಕ, ಕರಿಯಪ್ಪ ಹರಿಜನ, ವಿಜಯ ಜಾದವ, ದೀಪಾ ಪೈ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.