ಮುಂಡಗೋಡ: ಅಥ್ಲೆಟಿಕ್ಸನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಲಕ್ಕೊಳ್ಳಿ ಗ್ರಾಮದ ಯುವತಿಗೆ ತಾಲೂಕಿನ ಚವಡಳ್ಳಿ -ಮನವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸೋಮವಾರ ಸನ್ಮಾನಿಸಿದರು.
ತಾಲೂಕಿನ ಲಕ್ಕೊಳ್ಳಿ ಗ್ರಾಮದ ಯುವತಿ ಎನ್.ಎಸ್.ಸಿಮಿ ಅವರು ತೆಲಂಗಾಣದಲ್ಲಿ ನಡೆದ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇಸ್ ಪರವಾಗಿ ಸಿಮಿ ಅವರು ಭಾಗಿಯಾಗಿದ್ದರು. ಈ ಕ್ರೀಡಾ ಕೂಟದ 100 ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ರಿಲೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಚವಡಳ್ಳಿ ಗ್ರ್ರಾ.ಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಎನ್.ವಿ.ಸಾಮ್ಯುವೆಲ್ ಮತ್ತು ಸುಜಾ ದಂಪತಿಯ ಪುತ್ರಿ ಸಾಧನೆ ತೋರಿದ ಹಿನ್ನೆಲೆಯಲ್ಲಿ ಎನ್.ಎಸ್.ಸಿಮಿ ಅವರನ್ನು ಹಾಗೂ ಸಿಪಿಐ ಎಸ್.ಎಸ್ ಸಿಮಾನಿ, ಪಿಎಸೈ ಬಸವರಾಜ ಮಬನೂರ, ವರ್ಗಾವಣೆಗೊಂಡ ಸಂಘದ ಮೇಲ್ವಿಚಾರಕ ಸಾಕ್ಷಾತ್ ನಾಯ್ಕ ಮತ್ತು ನೂತನ ಮೇಲ್ವಿಚಾರಕ ವಿಶಾಲ್ ನಿಕ್ಕಂರನ್ನು ಸಂಘದ ವತಿಯಿಂದ ಸನ್ಮಾನಿಸಿದರು ಮತ್ತು ಎನ್.ಎಸ್.ಸಿಮಿ ಅವರಿಗೆ 5000 ರೂ ಸಹಾಯ ಧನದ ಚಕ್‍ನ್ನು ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಎಸ್.ಎಸ್ ಸಿಮಾನಿ ಗ್ರಾಮೀಣ ಭಾಗದ ಯುವತಿಯೊಬ್ಬಳು ಅಥ್ಲೆಟಿಕ್ಸನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿತಿರುವುದು ಬರಿ ಈ ಗ್ರಾಮಕ್ಕೆ ಮತ್ತು ತಾಲೂಕಿಗೆ ಅಷ್ಟಲ್ಲದೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪಧೆರ್Éೀಯಲ್ಲಿ ದೇಶಕ್ಕೆ ಬಂಗಾರದ ಪದಕ ಪಡೆಯುವಂತಾಗಲಿ ಎಂದು ಹಾರೈಸಿದರು.
ಸಹಕಾರಿ ಸಂಘದ ಅಧ್ಯಕ್ಷ ಪರಶುರಾಮ ತಹಶೀಲ್ದಾರ, ಉಪಾಧ್ಯಕ್ಷ ನಿಂಗಪ್ಪ ಭದ್ರಾಪುರ, ಸಂಘದ ಕಾರ್ಯದರ್ಶಿ ಗಜೇಂದ್ರ ವಾಲ್ಮೀಕಿ, ಪ್ರಮುಖರಾದ ಮಂಜುನಥ ಕಟಗಿ, ಪ್ರದೀಪ ಚವ್ಹಾಣ, ಪಿ.ಪಿ ನ್ಯಾಸರ್ಗಿ, ಶಿವಾನಂದ ಮಡ್ಲಿ ಧರ್ಮು ಆರೆಕೊಪ್ಪ, ವೈ.ಪಿ.ಪಾಟೀಲ, ಪಿಜಿ ಪಾಟೀಲ, ಪರಶುರಾಮ ಕುರಿಯವರ, ರಾಮು ಶಿಂಗನಳ್ಳಿ, ಮಹೇಶ ಅರ್ಕಸಾಲಿ, ಗೊಪಾಲ ಪಾಟೀಲ ಸೇರಿದಂತೆ ಮುಂತಾದವರಿದ್ದರು. ರಾಮಚಂದ್ರ ಬಿಸ್ಕಿಣ್ಣನವರ ನಿರ್ವಹಿಸಿದರು.