ಮುಂಡಗೋಡ: ತಾಲೂಕಿನ ಕೆಲವು ಕಡೆ ಭತ್ತದ ಬೆಳೆಗೆ ಕಂದು ಜಿಗಿ ಹುಳು ಬಾಧೆ ಕಾಣಿಸಿಕೊಂಡಿದ್ದು ರೈತರು ಸೂಕ್ತ ಔಷಧಿ ಸಿಂಪರಣೆ ಮಾಡುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೆಶಕ ಎಂ.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.
ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿಹುಳು ಬಾಧೆ ಕಂಡು ಬಂದಿದೆ ಇದರ ನಿಯಂತ್ರಣಕ್ಕಾಗಿ ರೈತರು ಪ್ರತಿ ಲೀಟರ್ ನೀರಿಗೆ 0.25 ಮಿ,ಲೀ. ಇಮಿಡಾಕ್ಲೋಪಿಡ್ ಅಥವಾ ಪ್ರತಿಲೀಟರ್ ನೀರಿಗೆ 0.20 ಮಿ,ಲೀ ಫ್ಲಮಿಂಡಮೈಡ್ ಔಷಧಿಯನ್ನು ಬೇರೆಸಿ ಸಿಂಪರಿಸಬೇಕು. ಹಾಗೂ ನೇರವಾಗಿ ಗಿಡದ ಬುಡಕ್ಕೆ ಸಿಂಪಡಿಸಬೇಕು. ಡಿಡಿವಿಪಿ ಲಭ್ಯವಿದ್ದರೆ ಅದನ್ನು ಪ್ರತಿಲೀಟರ್ ನೀರಿಗೆ 0.2ಮಿ,ಲೀ ಬೇರಸಿ ಸಿಂಪರಿಸಬೇಕು. ಡಿಡಿವಿಪಿಯನ್ನು ಮರಳಿಗೆ ಮೀಶ್ರಣ ಮಾಡಿ ಬೆಳೆಗೆ ಹಾಕಬಹುದಾಗಿದೆ. ಸಿಂಪರಣೆ ಕೈಗೊಳ್ಳುವಾಗ ಭತ್ತದ ಗದ್ದೆಯಲ್ಲಿರುವ ನೀರನ್ನು ತೆಗೆಯಬೇಕು ಮತ್ತು ಯೂರಿಯಾ ರಸಗೊಬ್ಬರ ನೀಡಬಾರದು. ಕೀಟನಾಶಕಗಳನ್ನು ಸಿಂಪರಣೆ ಕೈಗೊಳ್ಳುವಾಗ ಗದ್ದೆಯಲ್ಲಿರುವ ನೀರನ್ನು ತೆಗೆದ ನಂತರವೆ ಸಿಂಪರಿಸಬೇಕು. ಇಮಿಡಾಕ್ಲೋಪಿಡ್ ಸಸ್ಯ ಸಂರಕ್ಷಣಾ ಔಷಧಿಯು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಡಿಯಲ್ಲಿ ಲಭ್ಯವಿದ್ದು ರೈತರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದ್ದಾರೆ.