ಶಿರಸಿ: ಒಳ್ಳೆಯದನ್ನು ನೆನಪು ಮಾಡಿಕೊಂಡರೆ ನಾವು ಯಾವತ್ತಿಗೂ ಸಣ್ಣವರಾಗುವದಿಲ್ಲ. ಹಿರಿಯರು ಬದುಕಿದ ರೀತಿ ನೆನಪಿಟ್ಟು ನಾವೂ ಬದುಕಬೇಕು. ಆಗ ಮಾತ್ರ ಮಕ್ಕಳಿಗೆ ಹೇಳಲು ನೈತಿಕತೆ ಇರುತ್ತದೆ ಎಂದು ಹಿರಿಯ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ಅವರು ಸೋಮಸಾಗರದಲ್ಲಿ ವ್ಯಾಸನ್ಯಾಸ ಸಂಸ್ಥೆಯಿಂದ ನಡೆದ ವಿ.ನಾಗಪತಿ ಭಟ್ಟರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ಜೊತೆಗಿದ್ದು, ನಮ್ಮ ಹಾಗೇ ಇದ್ದು, ಹಲವು ಜವಬ್ದಾರಿಗಳನ್ನು ವಿಶಿಷ್ಟವಾಗಿ ನಿರ್ವಹಿಸಿದವರು ನಾಗಪತಿ ಭಟ್ಟ ಅವರು. ನಾವು ಅವರ ಹೊಣೆಗಾರಿಕೆ ಅರ್ಥ ಮಾಡಿಕೊಂಡು, ಅದನ್ನು ನೆನಪಿಸಿಕೊಂಡು ಮುನ್ನಡೆಯಬೇಕು. ಹಾಗೆ ಮುನ್ನಡೆಯಲು ಇಂಥ ಸಂಸ್ಮರಣ ಕಾರ್ಯಕ್ರಮ ನೆರವಾಗುತ್ತದೆ ಎಂದ ಅವರು, ನಮ್ಮ ಹಿರಿಯರು ಮಾಡಿದ್ದನ್ನು ನೆನಪಾಗಿ ಇಟ್ಟುಕೊಳ್ಳಬೇಕು. ಬದುಕುವದಿದ್ದರೆ ಹಾಗೆ ಬದುಕಬೇಕು ಎಂಬAತೆ ಬದುಕಬೇಕು ಎಂದು ಪ್ರತಿಪಾದಿಸಿದರು.
ನಮ್ಮಲ್ಲಿ ಭಾವುಕರಿದ್ದಾರೆ, ಭಾವಿಸಿಕೊಳ್ಳುವರಿಲ್ಲ. ನಾಗಪತಿ ಭಟ್ಟ ಅವರು ಎಲ್ಲರನ್ನೂ ನಮ್ಮವರೆಂದು ಭಾವಿಸಿಕೊಂಡು ನಡೆದವರು. ಸೋಮಸಾಗರಕ್ಕೆ ಅನೇಕ ಉದ್ದೇಶಕ್ಕೆ ಅನೇಕ ಆಕೃತಿ ನೀಡಿದವರು ಅವರು. ಭಟ್ಟರ ಕುಟುಂಬ ಎಂದರೆ ಭಾಂಧವ್ಯ ವಿಸ್ತಾರ ಮಾಡಿದ ಕುಟುಂಬ. ಬಳಕೆಯ ಸೂಕ್ಷö್ಮತೆ, ಆಪ್ತತೆ ಸಂಬೊಧನೆಯಲ್ಲೇ ಇರುತ್ತಿತ್ತು. ಬಿಡಲಾರದ, ಬಿಡಬಾರದ ಸಂಬAಧ ಇಲ್ಲಿದೆ. ಕುಟುಂಬದ ಯೋಗಕ್ಷೇಮಕ್ಕಾಗಿ ಒಳ್ಳೆಯ ಗುರುಗಳ, ಒಳ್ಳೆಯ ಸಹಪಾಠಿಗಳ ನಡುವಿನ ವಿದ್ಯಾಭ್ಯಾಸ ಬಿಟ್ಟರು. ಆದರೆ, ಓದುವದು ಬಿಡಲಿಲ್ಲ ಎಂದೂ ಉಲ್ಲೇಖಿಸಿದರು.
ಹಿರಿಯ ವಿದ್ವಾಂಸ ಗಂಗಾಧರ ಭಟ್ಟ ಅಗ್ಗೆರೆ ಅವರು ನಾಗಪತಿ ಭಟ್ಟ ಅವರ ಜೊತೆಗಿನ ಒಡನಾಟ ನೆನಪಿಸಿಕೊಂಡು, ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವ ಅವರದ್ದು. ಯಾರೇ ಬಂದರೂ ಅನಾರೋಗ್ಯ ಇಲ್ಲ ಎಂದರೂ ಆಸ್ಪತೆಗೆ ಕರೆದೋಯ್ದಿದ್ದಾರೆ. ಧುಃಖಿತರು ಯಾರಿದ್ದರೂ ಅವರನ್ನು ಕಾರುಣ್ಯದಿಂದ ಕಾಪಾಡಿದ್ದಾರೆ. ಸಿದ್ಧ ಪ್ರಸನ್ನತೆಗಾಗಿ ಕಾರ್ಯ ಮಾಡಿದ್ದಾರೆ ಎಂದರು.
ಕಲಾವಿದ ಕೆಳಮನೆಯ ಸಾಕೇತ ಪ್ರತಿಷ್ಠಾನದ ಕೆ.ಜಿ.ರಾಮರಾವ್, ನಾಗಪತಿ ಭಟ್ಟ ಅವರ ಯಕ್ಷಗಾನದ ಆಸಕ್ತಿ ವಿವರಿಸಿದರು. ವೇದಿಕೆಯಲ್ಲಿ ಗಿರಿಜಾ ನಾ. ಭಟ್ಟ, ಶಂಕರ ನಾರಾಯಣ ಭಟ್ಟ, ವಾಣಿ ಭಟ್ಟ, ಸ್ವಾತಿ ಹೆಗಡೆ, ಬಿ.ಎ.ಶೇಷಾಚಲ, ವೇದಾ ಇತರರು.
ವೇ.ಮೂ. ಪರಮೇಶ್ವರ ಭಟ್ಟ ಪುಟ್ಟಣಮನೆ ವೈದಿಕ ಮಂತ್ರ ಪಠಿಸಿದರು. ವಿದ್ವಾನ್ ವಿ.ಡಿ.ಭಟ್ಟ ಕರಸುಳ್ಳಿ ನಿರ್ವಹಿಸಿದರು. ಡಾ. ರಾಜೇಶ ಪ್ರಾಸ್ತಾವಿಕ ಮಾತನಾಡಿದರು. ದತ್ತು ಸೋಮಸಾಗರ ವಂದಿಸಿದರು.