ಶಿರಸಿ: ತಾಲೂಕಿನ 30 ಆರೋಗ್ಯ ಕೇಂದ್ರಗಳಲ್ಲಿ ಅ.8ರಂದು ಕೋವಿಡ್-19 ಲಸಿಕಾ ಮಹಾಮೇಳ ನಡೆಯಲಿದೆ ಎಂದು ತಹಶೀಲ್ದಾರ್ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಡ್ಡಾಪುರ ಉಪಕೇಂದ್ರ, ಮಳಲಗಾಂವ ಅಂಗನವಾಡಿ ಕೇಂದ್ರ, ವಡಿಗೇರಿ ಅಂಗನಾಡಿ ಕೇಂದ್ರ, ನರೇಬೈಲ್ ಅಂಗನವಾಡಿ ಕೇಂದ್ರ, ಕುಪ್ಪಗಡ್ಡೆ ಅಂಗನವಾಡಿ ಕೇಂದ್ರ, ದಾಸನಕೊಪ್ಪ ಪಂಚಾಯತ ಸಭಾಭವನ, ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ, ಹನುಮುಂತಿ ಉಪ ಕೇಂದ್ರ, ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಭೈರುಂಬೆ ಆಯುರ್ವೇದಿಕ ಆಸ್ಪತ್ರೆ, ಕಕ್ಕಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗೋಣಸರ ಅಂಗನವಾಡಿ ಕೇಂದ್ರ, ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೂರ್ಸೆ ವಿಎಫ್‍ಸಿ ಸಭಾಭವನ, ಬಂಡಲ್ ಪಂಚಾಯತ ಸಭಾಭವನ, ಕೊಳಗಿಬೀಸ್ ಮಾರುತಿ ದೇವಸ್ಥಾನ, ಸಾಲ್ಕಣಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲ್ಕಣಿ ಮೊಬೈಲ್ ಟೀಮ್, ಊಂಚಳ್ಳಿ ಉಪ ಆರೋಗ್ಯ ಕೇಂದ್ರ, ಕಾನಗೋಡ ಪಂಚಾಯತ್ ಸಭಾಭವನ, ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾನಗರ ಅಂಗನವಾಡಿ ಕೇಂದ್ರ, ಯಲ್ಲಾಪುರ ರೋಡ್ ಅಂಬೇಡ್ಕರ್ ಭವನ, ಕೋಟಿಗಲ್ಲಿಯ ಮದರಸಾ ಹಾಲ್, ನಾಡಿಗಲ್ಲಿ ಅಂಗನವಾಡಿ ಕೇಂದ್ರ, ಗಾಂಧಿನಗರ ಅಂಗನವಾಡಿ ಕೇಂದ್ರ, ಕಸ್ತೂರಬಾ ನಗರ 3ನೇ ಅಂಗನವಾಡಿ ಕೇಂದ್ರ, ಹುಬಳ್ಳಿ ರಸ್ತೆಯ ಅಂಬೇಡ್ಕರ್ ಭವನ ಹಾಗೂ ಚೆಲುವಾದಿ ಗಲ್ಲಿ ಉಪ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ತಹಶೀಲ್ದಾರ್ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.