ಶಿರಸಿ: ಶಬರ ಸಂಸ್ಥೆ ಹಾಗೂ ಯಕ್ಷಾಭಿವಂದನ ಸಹಕಾರದಿಂದ ವೀರ ಬರ್ಬರಿಕ ಯಕ್ಷಗಾನ ಪ್ರದರ್ಶನ ಅ.8ರ ಸಂಜೆ 6:30ರಿಂದ ಬಕ್ಕಳದ ಶ್ರೀಸತ್ಯನಾಥೇಶ್ವರ ಸಭಾಭವನದಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರ, ಗಣೇಶ ಆಚಾರಿ, ದರ್ಶನ ಎಂ. ಗೌಡ, ಅನಿರುದ್ಧ ಹೆಗಡೆ ವರ್ಗಾಸರ, ಸುಬ್ರಹ್ಮಣ್ಯ ಭಂಡಾರಿ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ನಾಗೇಂದ್ರ ಮುರೂರು, ಚಂದ್ರಹಾಸ ಗೌಡ, ರಾಜೇಶ ಭಂಡಾರಿ, ನಾಗರಾಜ ಭಟ್ಟ ಕುಂಕಿಪಾಲ, ಮಂಜುನಾಥ ಕೆರವಳ್ಳೀ, ನಿರಂಜನ ಜಾಗನಳ್ಳಿ, ಸನ್ಮಯ ಭಟ್ಟ, ಗೌರೀಶ ಗುಣವಂತೆ ಪಾಲ್ಗೊಳುವರು.. ಕೆಕೆ.ಸೊಸೈಟಿ, ಎಂ.ಪಿ.ಸೊಸೈಟಿ, ಪಿ.ಪಿ.ಸೊಸೈಟ, ಹಾಲು ಉತಾದಕರ ಸಂಘಗಳು ಸಹಕಾರ ನೀಡಿವೆ ಎಂದು ಪ್ರಕಟನೆಯಲ್ಲಿ ನಾಗರಾಜ ಜೋಶಿ ತಿಳಿಸಿದ್ದಾರೆ.