ನವದೆಹಲಿ: 2021 ರ ವಿಶ್ವ ಪ್ರಾಣಿ ದಿನದ ಸಂದರ್ಭದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಹೆಚ್ಚಿನ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಕೇಂದ್ರ ಯೋಜಿಸಿದೆ. ಈಗಿರುವ ಕಾನೂನನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ಪ್ರಾಣಿ ಹಿಂಸೆಯ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಯಾಕೆಂದರೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಪಿಸಿಎ) 1960 ರ ಅಡಿಯಲ್ಲಿ ದಂಡ ಕೇವಲ ರೂ. 50 ಮಾತ್ರ ಇದೆ.
ಗುರುಗ್ರಾಮ್‍ನ ಕಾಮಧೇನು ಗೋಶಾಲಾದಲ್ಲಿ ವಿಶ್ವ ಪ್ರಾಣಿ ದಿನವನ್ನು ಆಚರಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಾ ಅವರು, “ಪ್ರಾಣಿಹಿಂಸೆ ವಿರುದ್ಧ ನಾವು ಕರಡು ತಿದ್ದುಪಡಿ ವಿಧೇಯಕಕ್ಕೆ ಸಿದ್ಧರಿದ್ದೇವೆ. ಸಂಪುಟದ ಅನುಮೋದನೆ ಪಡೆಯವ ಪ್ರಕ್ರಿಯೆಯಲ್ಲಿ ಇದ್ದೇವೆ” ಎಂದಿದ್ದಾರೆ.
ಪ್ರಾಣಿಗಳ ಕಲ್ಯಾಣದಲ್ಲಿ ತೊಡಗಿರುವವರಿಗೆ ಹಾಗೂ ಚಲನಚಿತ್ರ ಚಿತ್ರೀಕರಣದಲ್ಲಿ ಪ್ರಾಣಿಗಳನ್ನು ಬಳಸುವವರಿಗೆ ಆನ್‍ಲೈನ್ ಅನುಮೋದನೆ ನೀಡುವ ಪ್ರಾಣಿಗಳ ಕಲ್ಯಾಣ ಮಂಡಳಿಯ ಪೆÇೀರ್ಟಲ್ ಅನ್ನು ಕೇಂದ್ರ ಸಚಿವರು ಸೋಮವಾರ ಬಿಡುಗಡೆ ಮಾಡಿದ್ದಾರೆ.
ಇದೇ ಸಮಾರಂಭದಲ್ಲಿ ಮಾತನಾಡಿದ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ಒ ಪಿ ಚೌಧರಿ, “ಕರಡು ತಿದ್ದುಪಡಿ ಮಸೂದೆಯ ಅಡಿಯಲ್ಲಿ ದಂಡ ಮತ್ತು ಜೈಲು ಶಿಕ್ಷೆಯನ್ನು ಹೆಚ್ಚಿಸಲು ನಾವು ಸೂಚಿಸಿದ್ದೇವೆ. ದಂಡವನ್ನು ಸಮತೋಲಿತ ರೀತಿಯಲ್ಲಿ ಇಡಲು ಸೂಚಿಸಲಾಗಿದೆ” ಎಂದು ಹೇಳಿದರು.
ನ್ಯೂಸ್ 13