ಕುಮಟಾ: ಶ್ರೀ ರಾಘವೇಂದ್ರ ಯುವಕ ಸಂಘ (ರಿ) ದೀವಗಿ ಇವರ ವತಿಯಿಂದ ದೀವಗಿಯ ಕೆಳಗಿನಕೇರಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.
ಸಂಘದ ಸದಸ್ಯರು ಹಾಗೂ ಗ್ರಾಮದ ಯುವಕರ ಸಹಕಾರದೊಂದಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮದ ಹಲವೆಡೆಗಳಲ್ಲಿ ಸ್ವಚ್ಚತೆ ಮಾಡಿದರು.
ಈ ವೇಳೆ ಸಂಘದ ಮಾಜಿ ಅಧ್ಯಕ್ಷರಾದ ನರಸಿಂಹ ಅಂಬಿಗ ಮಾತನಾಡಿ ಯುವ ಸಮುದಾಯ ಮನಸ್ಸು ಮಾಡಿದರೆ ಸ್ವಚ್ಚತೆಯ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರಣವೇ ಬದಲಾಗಬಹುದು. ಈ ದಿಶೆಯಲ್ಲಿ ನಮ್ಮದೊಂದು ಪುಟ್ಟ ಪ್ರಯತ್ನ ಎಂದ ಅವರು, ಊರಿನಲ್ಲಿ ಪ್ರತಿ ಭಾನುವಾರವೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಸಲಹೆ-ಸೂಚನೆ, ಸಹಕಾರ, ಪೆÇ್ರೀತ್ಸಾಹ ನೀಡಬೇಕೆಂದು ಗ್ರಾಮಸ್ಥರಲ್ಲಿ ವಿನಂತಿಸಿಕೊಂಡಿದ್ದಾರೆ.